ಕಡಬ ತಾಲೂಕು ಉದ್ಘಾಟನೆಗೆ ಮತ್ತೆ ವಿಘ್ನ..!! ► ನೂತನ ತಾಲೂಕು ಉದ್ಘಾಟನೆ ಕೊನೆಯ ಕ್ಷಣದಲ್ಲಿ ರದ್ದು…??

(ನ್ಯೂಸ್ ಕಡಬ) newskadaba.com ಕಡಬ, ನ.25. ಪರಿಸರದ ಜನತೆಯ ಬಹು ದಶಕಗಳ ಬೇಡಿಕೆಯಾದ ‘ನೂತನ ಕಡಬ ತಾಲೂಕು ಉದ್ಘಾಟನೆ’ ನೆರವೇರಲು ಕೆಲವೇ ತಾಸುಗಳು ಬಾಕಿ ಉಳಿದಿರುವಾಗ ತಾಲೂಕು ಉದ್ಘಾಟನೆಗೆ ಮತ್ತೊಂದು ವಿಘ್ನ ಎದುರಾಗಿದ್ದು, ಉದ್ಘಾಟನಾ ಸಮಾರಂಭವನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗುವ ಸಂಭವವಿದೆ.

ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಜದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ನಡೆಯುತ್ತಿರುವುದರಿಂದ ಭಾನುವಾರದಂದು ನಡೆಯಬೇಕಾಗಿದ್ದ ಕಡಬ ಹಾಗೂ ಮೂಡಬಿದಿರೆ ತಾಲೂಕು ಉದ್ಘಾಟನಾ ಕಾರ್ಯವನ್ನು ಮುಂದೂಡುವ ಬಗ್ಗೆ ಅಧಿಕಾರಿ ವರ್ಗದಿಂದ ಕೇಳಿ‌ ಬರುತ್ತಿದೆ. ಅಂತೂ ಕಡಬ ತಾಲೂಕು ಉದ್ಘಾಟನಾ ಸಮಾರಂಭವನ್ನು ವಿವಿಧ ಕಾರಣಗಳಿಗಾಗಿ ನಾಲ್ಕು ಬಾರಿ ಮುಂದೂಡಲಾಗಿದ್ದು, ಕಡಬಕ್ಕೆ ತಾಲೂಕಾಗುವಲ್ಲಿ ಯಾವುದಾದರೊಂದು ತೊಡಕು ಇದ್ದೇ ಇದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

Also Read  ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಪ್ರಣವ್ ಮುಖರ್ಜಿ ಅವರಿಗೆ ಶ್ರದ್ದಾಂಜಲಿ ಸಭೆ

error: Content is protected !!