ಬಿಸಿ ನೀರಿನ ಪಾತ್ರೆಗೆ ಬಿದ್ದು ಏಳು ವರ್ಷ ಪ್ರಾಯದ ಬಾಲಕಿ ಮೃತ್ಯು ► ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ ಎಂದು ಕುಟುಂಬಿಕರ ಆರೋಪ

(ನ್ಯೂಸ್ ಕಡಬ) newskadaba.com ಪುತ್ತೂರು, ನ.20. ಆಕಸ್ಮಿಕವಾಗಿ ಬಿಸಿನೀರಿನ ಪಾತ್ರೆಗೆ ಬಿದ್ದು ಏಳು ವರ್ಷದ ಬಾಲಕಿಯೋರ್ವಳು ಮೃತಪಟ್ಟ ದಾರುಣ ಘಟನೆ ಸೋಮವಾರದಂದು ಪುತ್ತೂರಿನಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಪುತ್ತೂರು ಸಾಂದಿಪನಿ ಶಾಲೆಯ ವಿದ್ಯಾರ್ಥಿನಿ, ಕೆಮ್ಮಿಂಜೆ ಬೆದ್ರಾಳ ನಿವಾಸಿ ರಮೇಶ್ – ಭವ್ಯಾ ದಂಪತಿಯ ಪುತ್ರಿ ತನ್ವಿ ಆರ್.ಬಿ. (7) ಎಂದು ಗುರುತಿಸಲಾಗಿದೆ. ಬಾಲಕಿಯು ಎರಡು ದಿನಗಳ ಹಿಂದೆ ಆಟವಾಡುತ್ತಿದ್ದಾಗ ಬಿಸಿನೀರಿನ ಪಾತ್ರೆಗೆ ಬಿದ್ದಿದ್ದಾಳೆ ಎನ್ನಲಾಗಿದ್ದು, ಗಂಭೀರ ಸುಟ್ಟ ಗಾಯಗೊಂಡ ಈಕೆಯನ್ನು ಪುತ್ತೂರು ಧನ್ವಂತರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರದಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವ ಹಾದಿಮಧ್ಯೆ ಬಾಲಕಿ ಮೃತಪಟ್ಟಿದ್ದು, ಧನ್ವಂತರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಬಾಲಕಿಯ ಸಾವಿಗೆ ಕಾರಣ ಎಂದು ಬಾಲಕಿಯ ಹೆತ್ತವರು ಆರೋಪಿಸಿದ್ದಾರೆ.

Also Read  ಮೀನು ಮಾರಾಟಗಾರರಿಂದ ಅರ್ಜಿ ಆಹ್ವಾನ

error: Content is protected !!
Scroll to Top