ಕಾರ್ಕಳ: ಆಸ್ತಿ ವಿಚಾರದಲ್ಲಿ ಜಗಳ ► ಒಡಹುಟ್ಟಿದ ತಮ್ಮನನ್ನೇ ಬಡಿದು ಕೊಂದ ಪಾಪಿ

(ನ್ಯೂಸ್ ಕಡಬ) newskadaba.com ಕಾರ್ಕಳ, ನ.19. ಆಸ್ತಿಗಾಗಿ ಒಡಹುಟ್ಟಿದ ತಮ್ಮನನ್ನೇ ರಾಡ್‌ನಿಂದ ಬಡಿದು ಕೊಂದು ಮೃತದೇಹವನ್ನು ಸುಟ್ಟುಹಾಕಿದ ಪ್ರಕರಣವನ್ನು ಭೇದಿಸಿರುವ ಕಾರ್ಕಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾರ್ಕಳ ನಗರದ ಮಂಗಲಪಾದೆ ಅವೇ ಮರಿಯ ನಿವಾಸಿ ಮೆಲ್ವಿನ್ ಸಂತೋಷ್ ಡಿಸೋಜ ಎಂದು ಗುರುತಿಸಲಾಗಿದೆ. ಆರೋಪಿ ಹಾಗೂ ಈತನ ಸೋದರ ಅವಿಲ್ ಡಿಸೋಜಾ ರವರ ಮಧ್ಯೆ 2018 ರ ಮಾರ್ಚ್ ನಲ್ಲಿ ಆಸ್ತಿಯ ವಿಚಾರದಲ್ಲಿ ಪರಸ್ಪರ ಜಗಳಗಳಾಗಿದ್ದು, ಆ ಸಂದರ್ಭದಲ್ಲಿ ಅವಿಲ್ ಡಿಸೋಜಾ ತನ್ನ ಅಣ್ಣ ಮೆಲ್ವಿನ್ ಸಂತೋಷ್ ಡಿಸೋಜನಿಗೆ ಹಲ್ಲೆಗೈದಿದ್ದಾನೆ. ಅದಕ್ಕೆ ಪ್ರತಿಯಾಗಿ ಮೆಲ್ವಿನ್ ರಾಡ್‌ನಿಂದ ಪ್ರತಿದಾಳಿ ನಡೆಸಿದಾಗ ಘಟನಾ ಸ್ಥಳದಲ್ಲಿಯೇ ಅವಿಲ್ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಅವಿಲ್ ನಾಪತ್ತೆಯಾದ ಕುರಿತು ಪ್ರಕರಣ ದಾಖಲಿಸಿಕೊಂಡ ಕಾರ್ಕಳ ನಗರ ಠಾಣಾ ಪೊಲೀಸರು ತೀವ್ರ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಪುತ್ತೂರು : ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಸೇರಿ 5 ಮಂದಿಗೆ ಕೋವಿಡ್ ಸೋಂಕು ದೃಢ

error: Content is protected !!
Scroll to Top