ಬಲ್ಯ: ಕಡವೆಯನ್ನು ಹೋಲುವ ಕಾಡುಪ್ರಾಣಿ ಕೊಳೆತ ಸ್ಥಿತಿಯಲ್ಲಿ ಪತ್ತೆ ► ದುರ್ನಾತದಿಂದ ಮೂಗು ಮುಚ್ಚಬೇಕಾದ ಪರಿಸ್ಥಿತಿ

(ನ್ಯೂಸ್ ಕಡಬ) newskadaba.com ಕಡಬ, ನ.19. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಹಾದು ಹೋಗಿರುವ ಹೊಸ್ಮಠ ಸಮೀಪ ದ ದೇರಾಜೆ ಕ್ರಾಸ್ ಬಳಿ ಕಡವೆಯನ್ನು ಹೋಲುವ ಕಾಡು ಪ್ರಾಣಿಯೊಂದು ಸತ್ತುಬಿದ್ದಿದ್ದು, ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ.

ದೇರಾಜೆ ಕ್ರಾಸ್ ಸುತ್ತಮುತ್ತ ಕಳೆದ ಎರಡು ದಿನಗಳಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಹುಡುಕಾಡಿದಾಗ ದೇರಾಜೆ ಕ್ರಾಸ್ ನಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಕಡವೆಯನ್ನು ಹೊಲುವ ಕಾಡುಪ್ರಾಣಿಯೊಂದು ಕೊಳೆತ ಸ್ಥಿತಿಯಲ್ಲಿ ಸತ್ತು ಬಿದ್ದಿರುವುದು ಗಮನಕ್ಕೆ ಬಂದಿದೆ. ಈ ಪ್ರಾಣಿಯು ಕೆಲವು ದಿನಗಳ ಹಿಂದೆ ಸತ್ತಿರುವ ಬಗ್ಗೆ ಅನುಮಾನಿಸಲಾಗಿದ್ದು, ಇದರ ದುರ್ವಾಸನೆಯಿಂದಾಗಿ ಈ ಭಾಗದ ಜನತೆ ಮೂಗು ಮುಚ್ಚಿ ‌ನಡೆಯುವಂತಾಗಿದೆ. ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದು, ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ತಳೀಯರು ಆಗ್ರಹಿಸಿದ್ದಾರೆ.

Also Read  ಬರಮೇಲು-ಕೊೖಲ ಶಿರಾಡಿ ಹಾಗೂ ಸಹಪರಿವಾರ ದೈವಗಳ ನೇಮೋತ್ಸವ

error: Content is protected !!
Scroll to Top