ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ ಯುವಕ ನಾಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ನ.18. ಸ್ನಾನಕ್ಕೆಂದು ನದಿಗೆ ತೆರಳಿದ್ದ ನಾಲ್ವರ ಪೈಕಿ ಓರ್ವ ಯುವಕ ಕಣ್ಮರೆಯಾದ ಘಟನೆ ಕುಮಾರಧಾರಾ ನದಿಯಲ್ಲಿ ಭಾನುವಾರದಂದು ನಡೆದಿದೆ.

ಕಣ್ಮರೆಯಾದ ಯುವಕನನ್ನು ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ವಯರಿಂಗ್ ನಿರ್ವಹಣೆ ಮಾಡುತ್ತಿದ್ದ ಕೂರ್ನಡ್ಕ ನಿವಾಸಿ ಸೈಫಲಿ ಖಾನ್‌ ಎಂದು ಗುರುತಿಸಲಾಗಿದೆ. ಈತ ತನ್ನ ಸ್ನೇಹಿತರೊಂದಿಗೆ ಭಾನುವಾರದಂದು ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿ ಬಳಿ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದು, ಕಣ್ಮರೆಯಾಗಿರುವುದಾಗಿ ತಿಳಿದುಬಂದಿದೆ. ಪುತ್ತೂರು ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.

Also Read  Aviator Oyunu: Qaydalar, Bonuslar Və Strategiyalar Pin Up Casino Az

error: Content is protected !!
Scroll to Top