ಬೇಲಿಯೇ ಎದ್ದು ಹೊಲ ಮೇಯ್ದರೆ ಏನೆನ್ನಬಹುದು…? ► ಬಜ್ಪೆ: 34 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.25. ವಿಮಾನ ನಿಲ್ದಾಣದ ಸಿಬ್ಬಂದಿಯೇ ಅಕ್ರಮವಾಗಿ ಚಿನ್ನವನ್ನು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿರುವ ಕಂದಾಯ ಗುಪ್ತಚರ ನಿರ್ದೇಶಾನಲಯ ಅಧಿಕಾರಿಗಳು 34 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡ ಘಟನೆ ಮಂಗಳವಾರದಂದು ನಡೆದಿದೆ.

ಬಜ್ಪೆ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್‌ವೇಸ್‌ನ ಏರ್‌ಕ್ರಾಫ್ಟ್ ನಿರ್ವಹಣೆಯ ತಾಂತ್ರಿಕ ಸಿಬಂದಿಯನ್ಬು ಬಂಧಿಸಿ ಆತನಿಂದ 1166.5 ಗ್ರಾಂ ತೂಕದ 34.41 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈತ ಗಲ್ಫ್ ರಾಷ್ಟ್ರದಿಂದ ಮಂಗಳೂರಿಗೆ ಬರುವ ವಿಮಾನದ ಶೌಚಾಲಯಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳ ಸಾಗಾಣಿಕೆಯಾಗುತ್ತಿತ್ತು. ಲಾಲ್‌ಬೀನ್ ಈ ಚಿನ್ನವನ್ನು ಏಜೆಂಟರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಇದ್ದ ಅಧಿಕಾರಿಗಳು ಜು. 25ರಂದು ಕಾರ್ಯಾಚರಣೆ ನಡೆಸಿ ದುಬೈನಿಂದ ಬಂದ ಜೆಟ್ ಏರ್‌ವೇಸ್ ವಿಮಾನದಿಂದ ಈ ಚಿನ್ನವನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

Also Read  ಬಜ್ಪೆ: ಬೆಳಗ್ಗಿನ ಜಾವ ಬೈಕ್‌ಗೆ ಢಿಕ್ಕಿ ಹೊಡೆದ ಮಿನಿ ಬಸ್ ► ದೇವಸ್ಥಾನಕ್ಕೆ ತೆರಳುತ್ತಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ ಮುಸ್ಲಿಂ ಯುವಕರು

ಆರೋಪಿಯು ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಚಿನ್ನವನ್ನು ಸಂಜೆ ವೇಳೆ ಸಿಟಿ ಸೆಂಟರ್‌ನಲ್ಲಿ ಏಜೆಂಟನೊಬ್ಬನಿಗೆ ಒಪ್ಪಿಸಬೇಕಿತ್ತು. ತನ್ನ ಕೆಲಸಕ್ಕೆ ಆತನ 20 ಸಾವಿರ ಸಂಭಾವನೆ ಪಡೆಯುತ್ತಿದ್ದ ಎಂದು ಡಿಎಆರ್ ಉಪ ನಿರ್ದೇಶಕ ವಿನಾಯಕ ಭಟ್ ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿ ನ್ಯಾಯಾಧೀಶ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

error: Content is protected !!
Scroll to Top