ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ತೆರಳಿದ ಯುವಕರಿಬ್ಬರು ನೀರುಪಾಲು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ.15. ಮೀನು ಹಿಡಿಯಲೆಂದು ಕುಮಾರಧಾರ ನದಿಗೆ ತೆರಳಿದ್ದ ಯುವಕರಿಬ್ಬರು ನಾಪತ್ತೆಯಾಗಿರುವ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ದಗನಕಜೆ ಎಂಬಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.


ನೀರುಪಾಲಾದವರನ್ನು ದೇವಚಳ್ಳ ಗ್ರಾಮದ ದೇವರಕಾಡು ನಿವಾಸಿಗಳಾದ ರಕ್ಷಿತ್ ಮತ್ತು ಲತೀಶ್ ಎಂದು ಗುರುತಿಸಲಾಗಿದೆ. ಇವರು ತನ್ನ ಮೂವರು ಸ್ನೇಹಿತರೊಂದಿಗೆ ಒಟ್ಟು ಐದು ಮಂದಿ ಮೀನು ಹಿಡಿಯಲೆಂದು ಬುಧವಾರ ಕುಮಾರಧಾರ ನದಿಗೆ ತೆರಳಿದ್ದು, ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ನಾಪತ್ತೆಯಾದವರಿಗಾಗಿ ಸ್ಥಳೀಯ ಈಜುಗಾರರರು ಶೋಧ ಕಾರ್ಯದಲ್ಲಿ ತೊಡಗಿದ್ದು, ಸುಬ್ರಹ್ಮಣ್ಯ ಠಾಣಾ ಪ್ರಕಟಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಬೈಕ್ ಹಾಗೂ ಪಿಕಪ್ ವಾಹನದ ನಡುವೆ ಢಿಕ್ಕಿ ➤‌ ಸವಾರ ಮೃತ್ಯು

error: Content is protected !!
Scroll to Top