ಆರ್.ಟಿ.ಸಿ., ಭೂಮಾಪನ, ಭೂ ಪರಿವರ್ತನೆಯಲ್ಲಿ ಸಮಸ್ಯೆಯೇ..? ► ನ.16 ರಂದು ಜಿಲ್ಲಾ ಮಟ್ಟದ ಕಂದಾಯ ಅದಾಲತ್‍ನಲ್ಲಿ ದೊರೆಯಲಿದೆ ಪರಿಹಾರ



(ನ್ಯೂಸ್ ಕಡಬ) newskadaba.com ಮಂಗಳೂರು, ನ.14. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಮತ್ತು ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ನವೆಂಬರ್ 12 ರಂದು ಏರ್ಪಡಿಸಲಾಗಿದ್ದ ‘ಕಂದಾಯ ಅದಾಲತ್’ನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರ ಸಚಿವ ಅನಂತ್‍ ಕುಮಾರ್ ರವರ ನಿಧನದಿಂದಾಗಿ ಮುಂದೂಡಲಾಗಿದ್ದು, ನವೆಂಬರ್ 16 ರಂದು ಪುನರ್ ನಿಗದಿಗೊಳಿಸಲಾಗಿದೆ.







ಭೂಪರಿವರ್ತನೆಗೆ ಸಂಬಂಧಿಸಿದಂತೆ ವಿಳಂಬ ಅಥವಾ ಸಮಸ್ಯೆಗಳು ಇದ್ದಲ್ಲಿ, ಇತರೆ ಕಂದಾಯ ವಿಷಯಗಳಾದ ಆರ್.ಟಿ.ಸಿ. ಭೂಮಾಪನ ಮುಂತಾದ ಕಂದಾಯ ವಿಷಯಗಳಿಗೆ ಸಂಬಂಧಪಟ್ಟಂತೆ ಮುಂಚಿತವಾಗಿ ಸಲ್ಲಿಸಿರುವಂತಹ ಅರ್ಜಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸ್ಥಳದಲ್ಲಿಯೇ ಪರಿಹಾರ ನೀಡುವ ಸಲುವಾಗಿ ನವೆಂಬರ್ 16 ಶುಕ್ರವಾರದಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮಂಗಳೂರು ಪುರಭವನದಲ್ಲಿ ‘ಕಂದಾಯ ಅದಾಲತ್’ ನಡೆಯಲಿದೆ ಎಂದು ಜಿಲ್ಲಾಡಳಿತವು ಪ್ರಕಟಣೆಯಲ್ಲಿ ತಿಳಿಸಿದೆ.






error: Content is protected !!
Scroll to Top