ಸುಬ್ರಹ್ಮಣ್ಯ: ದೇವಸ್ಥಾನಕ್ಕೆ ಹೋಗಿ ಹೊರ ಬಂದವರಿಗೆ ಕಾದಿತ್ತು ಶಾಕ್..!! ► ಪರದಾಡಿದ ಮಡಿಕೇರಿ ಮೂಲದ ಕುಟುಂಬ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ.13. ದೇವಸ್ಥಾನಕ್ಕೆಂದು ಆಗಮಿಸಿದ್ದ ಯಾತ್ರಾರ್ಥಿಯೋರ್ವರು ನಿಲ್ಲಿಸಿದ್ದ ಮಹೀಂದ್ರಾ ಬೊಲೆರೋ ವಾಹನವನ್ನು ಕಳವುಗೈದಿರುವ ಘಟನೆ ಸೋಮವಾರದಂದು ಸುಬ್ರಹ್ಮಣ್ಯದಲ್ಲಿ ನಡೆದಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನರಿಯಂದಡ ಗ್ರಾಮದ ಚೆಯ್ಯಂಡಾಣೆ ನಿವಾಸಿ ಬಿ‌.ಎಸ್‌. ಅಪ್ಪಚ್ಚ ಎಂಬವರ ಪುತ್ರ ಚಂದ್ರಶೇಖರ್ ಎಂಬವರು ಸೋಮವಾರದಂದು ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆಂದು ಆಗಮಿಸಿ ಬೊಲೆರೋ (KA.04.MJ.9270) ವಾಹನವನ್ನು ಸುಬ್ರಹ್ಮಣ್ಯದ ಸವಾರಿ ಮಂಟಪದ ಬಳಿ ನಿಲ್ಲಿಸಿ ದೇವಸ್ಥಾನಕ್ಕೆ ತೆರಳಿದ್ದಾರೆ. ಮಧ್ಯಾಹ್ನ ಬಂದು ನೋಡಿದಾಗ ಇವರು ನಿಲ್ಲಿಸಿದ್ದ ಬೊಲೆರೋವನ್ನು ಯಾರೋ ಕದ್ದೊಯ್ದಿರುವುದು ಗಮನಕ್ಕೆ ಬಂದಿದೆ. ಪರಿಸರದಲ್ಲೆಲ್ಲಾ ಹುಡುಕಾಡಿ ವಾಹನ ಪತ್ತೆಯಾಗದ ಹಿನ್ನೆಲೆಯಲ್ಲಿ ಚಂದ್ರಶೇಖರ್ ರವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ದ್ವಿಚಕ್ರ ವಾಹನ ಶೋ ರೂಂನಲ್ಲಿ ಅಗ್ನಿ ಅವಘಡ: ಓರ್ವ ವಶಕ್ಕೆ

error: Content is protected !!
Scroll to Top