ಅನಂತಕುಮಾರ್ ನಿಧನಕ್ಕೆ ವಿಕೃತಿ ಮೆರೆದ ‘ಮಂಗಳೂರು ಮುಸ್ಲಿಮ್ಸ್’ ಫೇಸ್‌ಬುಕ್‌ ಪೇಜ್ ► ಪಾಂಡೇಶ್ವರ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ನ.13. ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಸಂಬಂಧಿಸಿ ವಿಕೃತಿ ಮೆರೆದು ವಿವಾದಾತ್ಮಕ ಪೋಸ್ಟ್ ಪ್ರಕಟಿಸಿದ ‘ಮಂಗಳೂರು ಮುಸ್ಲಿಮ್ಸ್’ ಫೇಸ್‌ಬುಕ್‌ ಪೇಜ್ ವಿರುದ್ಧ ಪಾಂಡೇಶ್ವರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ‘ಮಂಗಳೂರು ಮುಸ್ಲಿಮ್ಸ್’ ಫೇಸ್‌ಬುಕ್‌ ಪೇಜ್ ನಲ್ಲಿ ಕೋಮು ಪ್ರಚೋದಿಸುವಂತಹ ವಿವಾದಾತ್ಮಕ ಪೋಸ್ಟ್ ವೊಂದನ್ನು ಪ್ರಕಟಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸಾವಿನಲ್ಲೂ ವಿಕೃತಿ ಮೆರೆದು ಕೀಳು ಮಟ್ಟದ ಪೋಸ್ಟ್ ಹಾಕಿದ್ದಕ್ಕೆ ಮುಸ್ಲಿಮರೂ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ತಪ್ಪಿತಸ್ಥರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದರು.

Also Read  ಸುಣ್ಣವೆಂದು ಇಲಿ ಪಾಷಾಣ ಬೆರೆಸಿ ವೀಳ್ಯದೆಲೆ ಸೇವಿಸಿದ್ದ ವೃದ್ದೆ ಮೃತ್ಯು

ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಸೂಕ್ತ ಕ್ರಮಕ್ಕಾಗಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದಾರೆ.

error: Content is protected !!
Scroll to Top