ಆಲಂಕಾರು: ಅಕ್ರಮ ಮದ್ಯ ಮಾರಾಟ ಪ್ರಕರಣ ► ಬೈಕ್, ಮದ್ಯದೊಂದಿಗೆ ಆರೋಪಿ ಸೆರೆ



(ನ್ಯೂಸ್ ಕಡಬ) newskadaba.com ಕಡಬ, ಜು.25. ಠಾಣಾ ವ್ಯಾಪ್ತಿಯ ಆಲಂಕಾರು ಪರಿಸರದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಆಲಂಕಾರು ಗ್ರಾಮ ಪಂಚಾಯಿತಿಯಿಂದ ನೀಡಿದ ದೂರಿನಂತೆ ದಾಳಿ ನಡೆಸಿದ ಅಬಕಾರಿ ಇಲಾಖಾ ಅಧಿಕಾರಿಗಳು ಒರ್ವನನ್ನು ಬಂಧಿಸಿ ಬೈಕ್ ಹಾಗೂ 5ಸಾವಿರ ಮೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡ ಘಟನೆ ಸೋಮವಾರ ತಡರಾತ್ರಿ ಆಲಂಕಾರಿನಲ್ಲಿ ನಡೆದಿದೆ.





ಪೆರಾಬೆ ಗ್ರಾಮದ ಸುರುಳಿ ಮೋನಪ್ಪ ಗೌಡರ ಪುತ್ರ ಕಿಟ್ಟಣ್ಣ ಗೌಡ(53ವ) ಬಂಧಿತ ಆರೋಪಿಯಾಗಿದ್ದು, ಈತ ಆಲಂಕಾರು ಪರಿಸರದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖಾಧಿಕಾರಿಗಳು ದಾಳಿ ನಡೆಸಿದ್ದಾರೆ.






error: Content is protected !!
Scroll to Top