ನಿರ್ಗತಿಕ ವ್ಯಕ್ತಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಉಪ್ಪಿನಂಗಡಿ ಠಾಣಾ ಸಬ್ ಇನ್ಸ್‌ಪೆಕ್ಟರ್ ► ಅನಾಥನ ಬಂಧುವಾಗಿ ಅಂತ್ಯ ಸಂಸ್ಕಾರಕ್ಕೆ ನೇತೃತ್ವ ನೀಡಿದ ನಂದಕುಮಾರ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.10. ನಿರ್ಗತಿಕನಾಗಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟಿದ್ದು, ಅಂತ್ಯಸಂಸ್ಕಾರ ನಡೆಸಲು ಬಂಧು ಮಿತ್ರರು ಯಾರೂ ಇಲ್ಲದಿರುವುದನ್ನು ಮನಗಂಡ ಸಬ್ ಇನ್ಸ್‌ಪೆಕ್ಟರ್ ಓರ್ವರು ಸಾಮಾಜಿಕ ಕಾರ್ಯಕರ್ತರ ಸಹಕಾರದೊಂದಿಗೆ ಮೃತನ‌ ಅಂತ್ಯಸಂಸ್ಕಾರ ನಡೆಸಿದ ಮಾನವೀಯ ಕಾರ್ಯ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯಲ್ಲಿ ನಿರ್ಗತಿಕನಾಗಿ ಜೀವನ ಸಾಗಿಸುತ್ತಿದ್ದ ಪ್ರಸನ್ನ ಎಂಬವರು ಮೃತಪಟ್ಟಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಚಿತೆಗೆ ಮೊದಲ ಕಟ್ಟಿಗೆಯನ್ನು ತಾನಿಟ್ಟು, ಅಗ್ನಿ ಸ್ಪರ್ಶ ಮಾಡುವ ಮೂಲಕ ಅನಾಥನ ಬಂಧುವಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಮೂಲಕ ಅನಾಥ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸುವ ಮೂಲಕ ಪೊಲೀಸ್ ಅಧಿಕಾರಿಯೋರ್ವರ ಮಾನವೀಯ ನಡೆಯು ಪ್ರಶಂಸಾತ್ಮಕವಾಗಿದೆ.

Also Read  ಸಚಿವ ಉಮೇಶ್ ಕತ್ತಿ ನಿಧನ..!

error: Content is protected !!
Scroll to Top