ಮೈತ್ರಿ ಸರಕಾರ ಭದ್ರವಾಗಿದೆ – ಶೀಘ್ರದಲ್ಲೇ ಕಡಬ ತಾಲೂಕು ಉದ್ಘಾಟನೆಗೆ ಕ್ರಮ ► ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ

(ನ್ಯೂಸ್ ಕಡಬ) newskadaba.com ಕಡಬ, ನ.09. ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷ ಜಯ ಗಳಿಸಿರುವುದರಿಂದ ಮೈತ್ರಿ ಸರಕಾರವನ್ನು ಜನ ಮೆಚ್ಚಿದ್ದಾರೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಕರ್ನಾಟಕದಲ್ಲಿ ಮೈತ್ರಿ ಸರಕಾರ ಭದ್ರವಾಗಿದ್ದು, ಬಿಜೆಪಿಯ ಕೌಂಟ್‌ಡೌನ್ ಶುರುವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕರ್ನಾಟಕ ರಾಜ್ಯ ಸರಕಾರದ ಸಚೇತಕ ಐವನ್ ಡಿ ಸೋಜ ಹೇಳಿದರು.

ಗುರುವಾರದಂದು ಕಡಬ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಬಿಜೆಪಿಯು ಕಾಂಗ್ರೆಸ್, ಜೆಡಿಎಸ್ ಮೈತ್ರಿಯನ್ನು ಅಪವಿತ್ರ ಎಂದು ಮತದಾರರಲ್ಲಿ ಸುಳ್ಳು ಆರೋಪ ಮಾಡುತ್ತಿದ್ದು, ಇದಕ್ಕೆ ಉಪ ಚುನಾವಣೆಯಲ್ಲಿ ಮತದಾರರು ಉತ್ತರಿಸಿದ್ದಾರೆ. ಬಿಜೆಪಿಯಲ್ಲಿ ಪಕ್ಷ ಸಂಘಟನೆಯಲ್ಲಿ ಗೊಂದಲವಿದ್ದು, ಗುಂಪುಗಾರಿಕೆ ನಡೆಯುತ್ತಿದೆ. ಯಡಿಯೂರಪ್ಪನವರು ಅಧಿಕಾರದ ಕನಸಿನಲ್ಲಿದ್ದು, ಬಿಜೆಪಿ ಪಕ್ಷದವರೇ ಅವರನ್ನು ಅಧಿಕಾರಕ್ಕೇರಲು ಬಿಡುತ್ತಿಲ್ಲ ಎಂದ ಅವರು ಮುಂದೊಂದು ದಿನ ಯಡಿಯೂರಪ್ಪನವರು ಪಾರ್ಟಿ ಬಿಟ್ಟು ಬಂದರು ಆಶ್ಚರ್ಯವಿಲ್ಲ ಎಂದರು. ಬಿಜೆಪಿಯು ವಿರೋಧ ಪಕ್ಷ ಸ್ಥಾನದಲ್ಲೂ ವಿಫಲವಾಗಿದ್ದು, ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಕರ್ನಾಟಕವನ್ನು ಕಡೆಗಣಿಸುತ್ತಿದ್ದು ಮಲತಾಯಿ ದೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಐವನ್ ಡಿ ಸೋಜ ಕೇಂದ್ರ ಸರಕಾರ ರೈತರ, ನೀರಾವರಿ ಹಾಗೂ ಬರ ಪರಿಸ್ಥಿತಿ ಸೇರಿದಂತೆ ಇತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಇದೆಲ್ಲದರಲ್ಲೂ ಕೇಂದ್ರ ಸರಕಾರ ವಿಫಲವಾಗಿದೆ ಎಂದರು.

Also Read  ಮೇ 29 ರಿಂದ  ಪ್ರಾಥಮಿಕ, ಪ್ರೌಢಶಾಲೆ ತರಗತಿಗಳು ಆರಂಭ

 

ಕಡಬ ತಾಲೂಕನ್ನು ಉದ್ಘಾಟಿಸುವಂತೆ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಮನವಿ ಮಾಡಿದಾಗ ಉತ್ತರಿಸಿದ ಐವನ್ ಡಿ ಸೋಜ, ಕಡಬದಲ್ಲಿ ತಾಲೂಕು ಮಟ್ಟದ ಇಲಾಖಾ ಕಚೇರಿಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಿನಿ ವಿಧಾನ ಸೌಧ, ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸಲಾಗುವುದು. ಉದ್ಘಾಟನೆಗೆ ಸಿದ್ಧವಾಗಿರುವ ನೂತನ ಸಮುದಾಯ ಆಸ್ಪತ್ರೆಯ ಕಟ್ಟಡವನ್ನು ಕಡಬ ತಾಲೂಕು ಉದ್ಘಾಟನೆಯಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆಯವರಲ್ಲಿ ಉದ್ಘಾಟಿಸಲಾಗುವುದು ಎಂದರು. ವೇದಿಕೆಯಲ್ಲಿ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ಮಾಝಿ ಜಿ.ಪಂ.ಸದಸ್ಯ ರಾಲ್ಸಿ ಡಿ. ಕೋಸ್ಟಲ್, ಡಿಸಿಸಿ ಸದಸ್ಯ ಸಿರಿಲ್ ಡಿ ಸೋಜ ಉಪಸ್ಥಿತರಿದ್ದರು.

Also Read  ಪಡಿತರ ಚೀಟಿ ತಿದ್ದುಪಡಿಗೆ ಸೆ. 01ರಿಂದ 10ರ ವರೆಗೆ ಕಾಲಾವಕಾಶ

error: Content is protected !!
Scroll to Top