ರಾಷ್ಟ್ರೀಯ ಮತದಾರರ ದಿನಾಚರಣೆ ಹಿನ್ನೆಲೆ ► ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರಬಂಧ, ಕ್ವಿಝ್ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.08. ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ 9ನೇ ತರಗತಿಯ ಮೇಲ್ಪಟ್ಟ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳು ನಡೆಯಲಿವೆ.

9 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಎಸ್ಸೆ ರೈಟಿಂಗ್(ಪ್ರಬಂಧ), ಪದವಿ ಪೂರ್ವ ಕಾಲೇಜು/ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಎಸ್ಸೆ ರೈಟಿಂಗ್(ಪ್ರಬಂಧ), ಕಾಲೇಜು/ವಿಶ್ವವಿದ್ಯಾಲಯ/ತಾಂತ್ರಿಕ ಸಂರ್ಸತೆಯ ವಿದ್ಯಾರ್ಥಿಗಳಿಗೆ ಎಸ್ಸೆ ರೈಟಿಂಗ್(ಪ್ರಬಂಧ), ಆರ್ಟ್ಸ್ ಮತ್ತು ಡ್ರಾಯಿಂಗ್ ಶಾಲೆಯ ಮಕ್ಕಳಿಗೆ ಪೋಸ್ಟರ್ ರಚನೆ, ಆರ್ಟ್ಸ್ ಮತ್ತು ಡ್ರಾಯಿಂಗ್ ಶಾಲೆಯ ಮಕ್ಕಳಿಗೆ ಕೊಲೇಜ್ ರಚನೆ, ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಕ್ವಿಜ್ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಮೊದಲನೆಯ ಬಹುಮಾನ ರೂ. 750/-, ಎರಡನೇಯ ಬಹುಮಾನ ರೂ.500/-, ಮೂರನೇಯ ಬಹುಮಾನ ರೂ.250/- ಗಳನ್ನೊಳಗೊಂಡ ಪುಸ್ತಕವನ್ನು ನೀಡಲಾಗುತ್ತದೆ.

Also Read  ಬಂಟ್ವಾಳ: ರೈಲು ಹಳಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಜಿಲ್ಲೆಯಲ್ಲಿ ನಡೆಸಿದ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಒಬ್ಬ ವಿದ್ಯಾರ್ಥಿಯು ರಾಜ್ಯ ಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದಾಗಿದ್ದು, ಸ್ಪರ್ಧಾತ್ಮಕ ಚಟುವಟಿಕೆಗಳು ಶಾಲಾ ಮತ್ತು ಕಾಲೇಜು ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ನಡೆದು, ಅಲ್ಲಿ ಆಯ್ಕೆ ಆದ ಮಕ್ಕಳ ವಿವರಗಳನ್ನು ಜಿಲ್ಲಾಮಟ್ಟದಲ್ಲಿ ಪಡೆದು ಡಿಸೆಂಬರ್ 2ನೇ ವಾರದಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ನಡೆಸಬೇಕಾಗಿರುತ್ತದೆ ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿಗಳು ಇವರ ಕಚೇರಿ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top