ಕಡಬ: ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನಿಗೆ ದೊರೆತ ಸಾವಿರಾರು ರೂ. ನಗದು ► ಮೂಲ ವಾರಸುದಾರರಿಗೆ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ನ.07. ಕಡಬದಿಂದ ಪಂಜ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಲ್ಲಿ ನಿರ್ವಾಹಕರಿಗೆ ದೊರೆತಿದ್ದ 37 ಸಾವಿರ ರೂ. ನಗದನ್ನು ಬುಧವಾರದಂದು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಅಕ್ಟೋಬರ್ 23 ರಂದು ಕಡಬದಿಂದ ಪಂಜಕ್ಕೆ ತೆರಳುತ್ತಿದ್ದ ಧರ್ಮಸ್ಥಳ ಘಟಕದ ಕೆಎಸ್ಸಾರ್ಟಿಸಿ KA.19.F.3060 ಬಸ್ ನ ನಿರ್ವಾಹಕ ಹನುಮಂತ ಹೊಡ್ಡಾರ್ ಎಂಬವರಿಗೆ ಬಸ್ಸಿನಲ್ಲಿ ದೊರೆತಿದ್ದ 37 ಸಾವಿರ ರೂ‌. ನಗದನ್ನು ಘಟಕ ವ್ಯವಸ್ಥಾಪಕರಲ್ಲಿ ಇರಿಸಿದ್ದರು. ಹಣದ ವಾರೀಸುದಾರರು ಬಾರದ ಹಿನ್ನೆಲೆಯಲ್ಲಿ ಘಟಕ ವ್ಯವಸ್ಥಾಪಕರ ಮೂಲಕ ಕಡಬ ಠಾಣೆಗೆ ನೀಡಲಾಗಿತ್ತು.

ಈ ಬಗ್ಗೆ ಮಾಧ್ಯಮದ ವರದಿಯನ್ನು ವೀಕ್ಷಿಸಿ ಹಣದ ಮೂಲ‌ ವಾರಸುದಾರರಾದ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಬಡಕ್ಕೋಡಿ ಸಮೀಪದ ಕೋಡಿಬೈಲು ನಿವಾಸಿ ಹಂಸಮೂರ್ತಿಯವರು ಕಡಬ ಠಾಣೆಗೆ ಆಗಮಿಸಿ ಸೂಕ್ತ ದಾಖಲೆಗಳನ್ನು ನೀಡಿ ಹಣವನ್ನು ಪಡೆದುಕೊಂಡರು. ಕೆಎಸ್ಸಾರ್ಟಿಸಿ ಕಡಬ ಸಂಚಾರ ನಿಯಂತ್ರಕರಾದ ವಸಂತ ಅಗತ್ತಾಡಿಯವರು ಕಡಬ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗರವರ ಸಮ್ಮುಖದಲ್ಲಿ ನಗದನ್ನು ಹಸ್ತಾಂತರಿಸಿದರು.

Also Read  ಅರಂತೋಡು SKSBV ವತಿಯಿಂದ ಅನ್ನುಜೂಂ ಬಕ್ರೀದ್ ಹಬ್ಬದ ವಿಶೇಷಾಂಕ ಬಿಡುಗಡೆ

error: Content is protected !!
Scroll to Top