ಚೈತ್ರಾ ಕುಂದಾಪುರ ಮತ್ತು ಸಹಚರರಿಗೆ ಜಾಮೀನು ಮಂಜೂರು ► ಜಾಮೀನು ದೊರೆತರೂ ಬುಧವಾರ ಜೈಲಿನಿಂದ ಹೊರ ಬರುವ ಸಾಧ್ಯತೆ..!!

(ನ್ಯೂಸ್ ಕಡಬ) newskadaba.com ಪುತ್ತೂರು, ನ.05. ಇತ್ತೀಚೆಗೆ ಸುಬ್ರಹ್ಮಣ್ಯದಲ್ಲಿ ನಡೆದ ಹೊಡೆದಾಟ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಚೈತ್ರಾ ಕುಂದಾಪುರ ಮತ್ತು ಸಹಚರರಿಗೆ ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠದಲ್ಲಿ ನಡೆಯುವ ಸರ್ಪ ಸಂಸ್ಕಾರದ ವಿಚಾರದಲ್ಲಿ ಪರಸ್ಪರ ವಾಗ್ವಾದ ಉಂಟಾಗಿ ಹೊಡೆದಾಟ ನಡೆದು ನ್ಯಾಯಾಂಗ ಬಂಧನದಲ್ಲಿದ್ದ ಚೈತ್ರಾ ಕುಂದಾಪುರ ಮತ್ತು ಸಹಚರರಾದ ಸುದಿನ, ಹರೀಶ, ನಿಖಿಲ್, ವಿನಯ್, ಮಣಿಕಂಠ ಹಾಗೂ ಹರೀಶ ಎಂಬವರಿಗೆ ಸೋಮವಾರ ಸಂಜೆ ಜಾಮೀನು ದೊರೆಯಿತಾದರೂ ಮಂಗಳವಾರ ಸರಕಾರಿ ರಜೆ ಇರುವ ಕಾರಣ ಬುಧವಾರದಂದು ಜೈಲಿನಿಂದ ಹೊರಬರುವ ಸಾಧ್ಯತೆಯಿದೆ. ಚೈತ್ರಾ ಪರ ಪುತ್ತೂರಿನ ವಕೀಲರಾದ ಮಹೇಶ್ ಕಜೆ ವಾದಿಸಿದ್ದರು.

Also Read  ಪುತ್ತೂರು: ಓಮ್ನಿ ಕಾರು ಕಳವು

error: Content is protected !!
Scroll to Top