ಸುಬ್ರಹ್ಮಣ್ಯ: ಹೊಡೆದಾಟ ಪ್ರಕರಣದಲ್ಲಿ ಗುರುಪ್ರಸಾದ್ ಪಂಜ ಅವರಿಗೆ ಜಾಮೀನು ► ನ್ಯಾಯಾಲಯಕ್ಕೆ ಹಾಜರಾಗದ ಚೈತ್ರಾ ವಿರುದ್ಧ ಗರಂ ಆದ‌ ನ್ಯಾಯಾಧೀಶರು ► ನ.05 ರಂದು ಆಂಬ್ಯುಲೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲು ಆದೇಶ

(ನ್ಯೂಸ್ ಕಡಬ) newskadaba.com ಸುಳ್ಯ, ನ.04. ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠಕ್ಕೆ ಸಂಬಂಧಿಸಿ ಇತ್ತೀಚೆಗೆ ನಡೆದ ಹೊಡೆದಾಟ ಪ್ರಕರಣದ ಆರೋಪಿ ಗುರುಪ್ರಸಾದ್ ಪಂಜ ಅವರಿಗೆ ಸುಳ್ಯ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಇನ್ನೋರ್ವೆ ಆರೋಪಿ ಚೈತ್ರಾ ಕುಂದಾಪುರ ಜ್ವರದ ನೆಪದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ಇದ್ದುದರಿಂದ ಗರಂ ಆದ ಮಾನ್ಯ ನ್ಯಾಯಾಧೀಶರು ನವೆಂಬರ್ 05 ರಂದು ಚೈತ್ರಾ ಕುಂದಾಪುರರವರನ್ನು ಅಂಬ್ಯುಲೆನ್ಸ್ ಮೂಲಕ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಮತ್ತು ಜೈಲು ಅಧೀಕ್ಷಕರು ಹಾಗೂ ಚೈತ್ರಾರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಜರಾಗಬೇಕೆಂದು ಆದೇಶಿಸಿದ್ದಾರೆ. ಚೈತ್ರಾ ಹಾಜರಾಗದೆ ಇದ್ದುದರಿಂದ ಆಕೆಯ ಸಹಚರರನ್ನು ನವೆಂಬರ್ 05 ರಂದು ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಲು ಆದೇಶಿಸಿರುವುದರಿಂದ ಆರು ಮಂದಿ ಸಹಚರರು ಜೈಲಿನಲ್ಲೇ ನಿಲ್ಲುವಂತಾಗಿದೆ.

Also Read  ಯುವಕನಿಗಾಗಿ ಮನೆ ಮುಂದೆ ಧರಣಿ ಕುಳಿತ ಯುವತಿ

error: Content is protected !!
Scroll to Top