ಕಡಬ: ನ.5 ರಿಂದ 8 ರವರೆಗೆ ಕ್ಯಾಥೋಲಿಕ್ ಸಮಾಜದ ‘9ನೇ ಜಿಲ್ಲಾ ಯುವ ವಸತಿ ಸಮ್ಮೇಳನ’

(ನ್ಯೂಸ್ ಕಡಬ) newskadaba.com ಕಡಬ, ನ.03. ಭಾರತೀಯ ಕಥೋಲಿಕ್ ಯುವ ಸಂಚಾಲನ(ಐಸಿವೈಎಮ್)ದ, ಮಂಗಳೂರು ಧರ್ಮಪ್ರಾಂತದ ಕೇಂದ್ರಿಯ ಸಮಿತಿಯ ನಿರ್ದೆಶನದಲ್ಲಿ ಪುತ್ತೂರು ವಲಯ ಮತ್ತು ಕಡಬ ಸೈಂಟ್ ಜೋಕಿಮ್ಸ್ ಚರ್ಚ್ ಘಟಕದ ಆಶ್ರಯದಲ್ಲಿ 9ನೇ ಜಿಲ್ಲಾ ವಸತಿ ಸಮಾವೇಶವು ನ. 5 ನೇ ಸೋಮವಾರದಿಂದ ನ. 8 ನೇ ಗುರುವಾರ ತನಕ ಕಡಬ ಜೋಕಿಮ್ಸ್ ಚರ್ಚ್ ಮೈದಾನದಲ್ಲಿ ನಡೆಯಲಿದೆ.

ಕಥೋಲಿಕ್ ಸಭಾದ ಭಾರತೀಯ ಯುವ ಸಂಚಾಲನದ ಪುತ್ತೂರು ವಲಯಾಧ್ಯಕ್ಷ ಜೇಮ್ಸ್ ಕ್ರಿಶಾಲ್ ಡಿಸೋಜಾ ಅವರು ಶುಕ್ರವಾರ ಕಡಬದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು. ಸಮಾವೇಶದಲ್ಲಿ ದ.ಕ. ಮತ್ತು ಕಾಸರಗೋಡ್ ಜಿಲ್ಲಾ ವ್ಯಾಪ್ತಿಯ ಸುಮಾರು 124 ಚರ್ಚ್ ಘಟಕಗಳಿಂದ ಸುಮಾರು 400 ಯುವಕ/ಯುವತಿಯರು ಆಗಮಿಸಲಿದ್ದಾರೆ. 4 ದಿನಗಳ ವಸತಿ ಸಮಾವೇಶದಲ್ಲಿ ಸಮಾಜದ ಯುವಕರಿಗೋಸ್ಕರ ವಿವಿದ ತರಬೇತಿ ,ವ್ಯಕ್ತಿತ್ವ ವಿಕಸನ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದರು. ನ 5 ರಂದು ಸಂಜೆ ಬಳ್ಳಾರಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಪರಮಪೂಜ್ಯ ಹೆನ್ರಿ ಡಿ’ಸೋಜ, ಕಾರ್ಯಕ್ರಮದ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಾಯ್ ಕಾಸ್ತಲಿನೊ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನ. 6 ರಂದು ವಿವಿಧ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು ನಡೆಯಲಿವೆ, ನ 7 ರಂದು ಸಂಜೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಪರಮ ಪೂಜ್ಯ ಪೀಟರ್ ಪಾವ್ಲ್ ಸಲ್ಡಾನ ಅವರನ್ನು ಕಡಬ ಪೇಟೆಯಲ್ಲಿ ಸ್ವಾಗತ ಕೋರಿ ಮೆರವಣಿಗೆಯಲ್ಲಿ ಕರೆತರಲಾಗುವುದು, ಬಳಿಕ ಅವರು ದಿವ್ಯ ಬಲಿಪೂಜೆ ನಡೆದು ಸಂದೇಶ ನೀಡಲಿದ್ದಾರೆ. ಭಾರತೀಯ ಯುವ ಸಮಿತಿಯ ರಾಷ್ಟ್ರೀಯ ನಿರ್ದೇಶಕ ಫಾ| ಚೇತನ್ ಮಚಾದೊ, ಅಧ್ಯ್ಯಕ್ಷ ಪರ್ಸಿವಲ್ ಹಾಲ್ಟ್ ಹಾಗೂ ರಾಷ್ಟ್ರೀಯ ಯುವ ಸಚೇತಕ ಫಾ|ಜೇಕಬ್ ಅನಿಲ್ ಡೆಸಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Also Read  ಬೆಳ್ತಂಗಡಿ : ರಸ್ತೆ ಅಪಘಾತ ➤ ಬೈಕ್ ಸವಾರ ಮೃತ್ಯು..!

ನ.8 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತದ ಪೂರ್ವ ಧರ್ಮಾಧ್ಯಕ್ಷ ಪರಮ ಪೂಜ್ಯ ಅಲೋಸಿಯಸ್ ಪಾವ್ಲ್ ಡಿ’ಸೋಜ, ಧರ್ಮಪ್ರಾಂತದ ವಿಗಾರ್ ಜೆರಾಲ್ ಮೊನ್ಸಿಞರ್ ಮ್ಯಾಕ್ಸಿಂ ನೊರೊನ್ಹಾ, ಕಡಬದಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳಾದ ಅಲೆಕ್ಸಾಂಡರ್ ಲೂವಿಸ್ ಹಾಗೂ ಕೇಂದ್ರೀಯ ಸಮಿತಿಯ ನಿರ್ದೆಶಕರು ಫಾ| ರೊನಾಲ್ಡ್ ಪ್ರಕಾಶ್ ಡಿ ಸೋಜ, ಸಹ ನಿರ್ದೇಶಕರಾದ ಫಾ| ಆಶ್ವಿನ್ ಲೋಹಿತ್ ಕಾರ್ಡೋಜಾ, ಪುತ್ತೂರು ವಲಯ ವಿಗಾರ್ ವಾರ್ ಫಾ| ಅಲ್ಪೇಡ್ ಜೆ ಪಿಂಟೊ, ವಲಯ ನಿರ್ದೇಶಕ ಫಾ| ಪ್ರವೀಣ್ ಡಿ’ಸೋಜ, ಕಡಬ ಘಟಕದ ನಿರ್ದೆಶಕ ಫಾ|ರೋನಾಲ್ಡ್ ಲೋಬೊ, ಕರ್ನಾಟಕ ರಾಜ್ಯ ಪ್ರಾಂತದ ಯುವ ಸಮಿತಿಯ ಅದ್ಯಕ್ಷ ಪ್ರಜ್ವಲ್ ಲೊಪೇಜ್, ಕರ್ನಾಟಕ ರಾಜ್ಯ ಸರಕಾರದ ಸಚೇತಕ ಐವನ್ ಡಿ’ಸೋಜ, ಮಾಜಿ ಶಾಸಕ ಜೆ.ಅರ್. ಲೋಬೊ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಸಮಿತಿಯ ಸದಸ್ಯ ಪಿಯುಸ್ ಎಲ್. ರೊಡ್ರಿಗಸ್, ಕಡಬ ತಹಶಿಲ್ದಾರ್ ಜೋನ್ ಪ್ರಕಾಶ್ ರೊಡ್ರಿಗಸ್, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಥೋಲಿಕಾ ಸಭಾದ ಮಂಗಳೂರು ಕೇಂದ್ರಿಯ ಸಮಿತಿಯ ಅದ್ಯಕ್ಷ್ಸ ಪಾವ್ಲ್ ರೋಲ್ಪಿ ಡಿ ಕೋಸ್ಟಾ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ. ವರ್ಗೀಸ್, ಪುತ್ತೂರು ತಾ,ಪಂ ಸದಸ್ಯ ಪಝಲ್ ಕೊಡಿಂಬಾಳ, ಕಡಬ ಗ್ರಾಮ ಪಂ. ಅದ್ಯಕ್ಷ ಬಾಬು ಮುಗೇರ, ಕೇಂದ್ರೀಯ ಸಮಿತಿಯ ಅದ್ಯಕ್ಷರಾದ ಜೈಸನ್ ಪಿರೇರಾ, ಕಾರ್ಯದರ್ಶಿ ಫೆವೀಶಾ ಮೊಂತೆರೋ, ಕೇಂದ್ರೀಯ ಸಮಿತಿ ಕಾರ್ಯಕಾರಿ ಸಮಿತಿ ಅಧ್ಯಕ ಜೇಮ್ಸ್ ಕ್ರಿಶಾಲ್ ಡಿ ಸೋಜ, ಕಾರ್ಯದರ್ಶಿ ರಕ್ಷಿತ್ ಪಿಂಟೋ, ಕಡಬ ಘಟಕದ ಅಧ್ಯಕ್ಷರು ಫ್ರಾಯಲ್ ಗ್ಲಾಡ್‍ಸನ್ ಕ್ರೋಸ್, ಕಾರ್ಯದರ್ಶಿ ರಶ್ಮೀತಾ ಪಿರೇರಾ .ಸಚೇತ ಜೋಸೆಫ್ ವೇಗಸ್,ಕಡಬ ಸಂತ ಜೋಕಿಮರ ಚರ್ಚ್‍ನ ಪಾಲನಾ ಸಮಿತಿಯ ಉಪಾಧ್ಯಕರಾದ ಲುವಿಸ್ ಮಸ್ಕರೇನ್ಹಸ್, ಕಾರ್ಯದರ್ಶಿ ಜೆಸಿಂತಾ ವೇಗಸ್, ಪ್ರಮುSರಾದ ಸೈಮನ್ ಲೂವಿಸ್ ರೊಡ್ರಿಗಸ್, ಕ್ಲಾರ ಲೋಬೊ, ಜೆಸಿಂತ ಮಾರ್ಟಿಸ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಜೇಮ್ಸ್ ಕ್ರಿಶಾಲ್ ಡಿಸೋಜ ವಿವರಿಸಿದರು.

Also Read  ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಸವಣೂರು ಪೇಟೆ ಅಕ್ಷರಶ: ಸಬ್ಧ

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರಿಯ ಸಮಿತಿಯ ಸಹಕಾರ್ಯದರ್ಶಿ ಅನೀಶ್ ಲೋಬೊ, ಕಡಬ ಘಟಕ ಅಧ್ಯಕ್ಷ ಫ್ರಾಯಲ್ ಗ್ಲಾಡ್‍ಸನ್ ಕ್ರೋಸ್, ಪ್ರಮುಖರಾದ ಜೋಸೆಫ್ ವೇಗಸ್, ಜೋಕಿಮ್ ಡಿಸೋಜಾ, ಅನಿತಾ ಲೋಬೋ, ರೊವಿವಾ ಪಿರೇರಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top