ದೀಪಾವಳಿ ಧಮಾಕಾದ ‘ಸ್ಪಿನ್ & ವಿನ್’ ಅದೃಷ್ಟಶಾಲಿ ಯೋಜನೆ ► ಕಡಬದ ದುರ್ಗಾಂಬಾ ಮೊಬೈಲ್ಸ್ ನಲ್ಲಿ ಸ್ಮಾರ್ಟ್ ಫೋನ್ ಗೆದ್ದ ಗ್ರಾಹಕ

(ನ್ಯೂಸ್ ಕಡಬ) newskadaba.com ಕಡಬ, ನ.03. ದೀಪಾವಳಿ ಅಂಗವಾಗಿ ವಿವೋ ಮೊಬೈಲ್ ಕಂಪೆನಿಯು ಆಯೋಜಿಸಿರುವ ‘ಸ್ಪಿನ್ & ವಿನ್’ ಅದೃಷ್ಟಶಾಲಿ ಆಯ್ಕೆಯಲ್ಲಿ ಕಡಬ ಮಾಲೇಶ್ವರ ನಿವಾಸಿ ಮೊಯ್ದೀನ್ ಮದರ್ ಇಂಡಿಯಾ ವೀವೋ Y7 ಮೊಬೈಲನ್ನು ಉಚಿತವಾಗಿ ಪಡೆದುಕೊಂಡಿದ್ದಾರೆ.

ಅವರು ಕಡಬದ ದುರ್ಗಾಂಬಾ ಮೊಬೈಲ್ ಸ್ಟೋರ್ ನಲ್ಲಿ ಇತ್ತೀಚೆಗೆ ಮಾರುಕಟ್ಟೆ ಪ್ರವೇಶಿಸಿದ ವೀವೋ ವಿ11 ಪ್ರೋ ಮೊಬೈಲನ್ನು ಖರೀದಿಸಿದ್ದು, ಅದೃಷ್ಟ ಪರೀಕ್ಷಿಸಿದಾಗ ವಿವೋ ವೈ7 ಸ್ಮಾರ್ಟ್ ಫೋನ್ ಉಚಿತವಾಗಿ ದೊರೆತಿದೆ. ದುರ್ಗಾಂಬಾ ಮೊಬೈಲ್ ಸ್ಟೋರ್ ನಲ್ಲಿ ದೀಪಾವಳಿ ಧಮಾಕಾ ನಡೆಯುತ್ತಿದ್ದು, ಅದರನ್ವಯ ಪ್ರತೀ ಖರೀದಿಗೆ ಲಕ್ಕೀ ಕೂಪನ್ ಆಯೋಜಿಸಲಾಗಿದ್ದು, ಪ್ರಥಮ ಬಹುಮಾನವಾಗಿ ಟಿವಿ ಹಾಗೂ ದ್ವಿತೀಯ ಬಹುಮಾನವಾಗಿ ಸ್ಮಾರ್ಟ್ ಫೋನ್ ಹಾಗೂ ಆಕರ್ಷಕ ಬಹುಮಾನಗಳು ದೊರೆಯಲಿವೆ‌. ಕೇವಲ 599 ರೂ. ಗಳಿಗೆ ಹ್ಯಾಂಡ್ ಸೆಟ್ ದೊರೆಯಲಿದ್ದು, ವಿವಿಧ ಕಂಪೆನಿಗಳ ಸ್ಮಾರ್ಟ್ ಫೋನ್ ಗಳ ವಿಶೇಷ ಪ್ರದರ್ಶನ, ಎಕ್ಸ್‌ಚೇಂಜ್‌ ಆಫರ್, 0% ಬಡ್ಡಿ ದರದಲ್ಲಿ ಕಂತುಗಳಲ್ಲಿ ಮೊಬೈಲ್ ಫೋನ್ ಖರೀದಿ ಸೇರಿದಂತೆ ಹಲವು ಆಫರ್ ಗಳಿದ್ದು, ಹೆಚ್ಚಿನ ಮಾಹಿತಿಗಾಗಿ 9448624943 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರಾದ ದಯಾನಂದರವರು ತಿಳಿಸಿದ್ದಾರೆ.

Also Read  ಕಡಬ: ಸೆ.‌ 16ರ ವರೆಗೆ ಪಹಣಿಗಳಿಗೆ ಆದಾರ್ ಜೋಡಣೆ ಆಂದೋಲನ

error: Content is protected !!
Scroll to Top