►► ಪ್ರಕಟಣೆ ಸುಂಕದಕಟ್ಟೆ 72 ಕಾಲೋನಿಯಲ್ಲಿ ಮಹಿಳೆ ಮೃತಪಟ್ಟ ಹಿನ್ನೆಲೆ ► ನಾಳೆ (ನ.03) ನಡೆಯಬೇಕಿದ್ದ ಅತಿಥಿ ಸತ್ಕಾರ ಕಾರ್ಯಕ್ರಮ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಕಡಬ, ನ.02. ಇಲ್ಲಿನ ಐತ್ತೂರು ಗ್ರಾಮದ ಸುಂಕದಕಟ್ಟೆ 72 ಕಾಲೋನಿಯ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ನವೆಂಬರ್ 03 ಶನಿವಾರದಂದು ನಡೆಯಬೇಕಿದ್ದ ವಿವಾಹ ಕಾರ್ಯಕ್ರಮದ ಅತಿಥಿ ಸತ್ಕಾರವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.

ಐತ್ತೂರು ಗ್ರಾಮದ ಸುಂಕದಕಟ್ಟೆ 72 ಕಾಲೋನಿ ನಿವಾಸಿ ಎಂ.ಹನುಮಂತನ್ ಎಂಬವರ ಪುತ್ರಿ ಎಚ್. ಸುಕನ್ಯಾ (MSW HR) ಎಂಬವರ ವಿವಾಹವು ಅಕ್ಟೋಬರ್ 28 ರಂದ ತಮಿಳುನಾಡಿನಲ್ಲಿ ನಡೆದಿದ್ದು, ಅತಿಥಿ ಸತ್ಕಾರ ಕಾರ್ಯಕ್ರಮವನ್ನು ನವೆಂಬರ್ 03 ರಂದು ಸುಂಕದಕಟ್ಟೆ 72 ಕಾಲೋನಿಯ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಅಕ್ಟೋಬರ್ 31 ರಂದು ಸಂಬಂಧಿಕರೋರ್ವರು ಮೃತಪಟ್ಟ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಾಗಿದ್ದ ಅತಿಥಿ ಸತ್ಕಾರ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಹನುಮಂತನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಮೊಬೈಲ್ 9606854415 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಅತ್ಯುತ್ತಮ ಸೇವೆ ಮಾಡಿದ ರಾಜ್ಯ ಸರ್ಕಾರಿ ನೌಕರರಿಂದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ

error: Content is protected !!
Scroll to Top