ಬಲ್ಯ – ಪದವು ಪರಿಸರದಲ್ಲಿ ಕಾಡಾನೆ ಪ್ರತ್ಯಕ್ಷ ► ಉಪ್ಪಿನಂಗಡಿ – ಸುಬ್ರಹ್ಮಣ್ಯ ರಸ್ತೆಯಲ್ಲಿ ರಾತ್ರಿ ಹೊತ್ತು ಸಂಚರಿಸುವವರಿಗೆ ಎಚ್ಚರ

(ನ್ಯೂಸ್ ಕಡಬ) newskadaba.com ಕಡಬ, ಅ.30. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪದವು ಎಂಬಲ್ಲಿ ಕಾಡಾನೆಯು ಪ್ರತ್ಯಕ್ಷವಾಗಿದ್ದು, ಪರಿಸರದ ಜನರನ್ನು ಭಯಭೀತರನ್ನಾಗಿಸಿದೆ‌.

ಕಳೆದೆರಡು ದಿನಗಳ ಹಿಂದೆ ಇಚಿಲಂಪಾಡಿ ಪರಿಸರಕ್ಕೆ ಕಾಡಾನೆ ಆಗಮಿಸಿದೆ ಎಂಬ ವದಂತಿ ಹಬ್ಬಿತ್ತಾದರೂ, ಮಂಗಳವಾರ ಸಂಜೆಯ ವೇಳೆಗೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಪ್ರತ್ಯಕ್ಷವಾಗಿದೆ. ಇಚಿಲಂಪಾಡಿಯಿಂದ ಬಲ್ಯ ಮೂಲವಾಗಿ ಕಾಡಿನಲ್ಲಿ ಸಂಚರಿಸಿದ ಆನೆಯು ಪದವು ಗೇರುತೋಪಿನಿಂದ ನೇರವಾಗಿ ರಸ್ತೆಗಿಳಿದಿದೆ. ಆನೆಯು ರಸ್ತೆಯಲ್ಲಿ ಸಂಚರಿಸುತ್ತಿದ್ದುದನ್ನು ಬೈಕ್ ಸವಾರರೊಬ್ಬರು ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಡಾನೆಯು ಯಾವುದೇ ಕ್ಷಣದಲ್ಲಿ ರಸ್ತೆಗಿಳಿಯುವ ಸಂಭವವಿದ್ದು, ಸಾರ್ವಜನಿಕರು ರಾತ್ರಿ ಹೊತ್ತು ಸಂಚರಿಸುವಾಗ ಆದಷ್ಟು ಜಾಗರೂಕತೆ ವಹಿಸುವಂತೆ ಅರಣ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.

Also Read  ದ್ವಿತೀಯ ಪಿಯುಸಿ ಪರೀಕ್ಷೆ: ಸವಣೂರು ವಿದ್ಯಾರಶ್ಮಿ ವಿದ್ಯಾಲಯಕ್ಕೆ ಶೇ.94 ಫಲಿತಾಂಶ

error: Content is protected !!
Scroll to Top