ಪುತ್ತೂರಿನ ಖ್ಯಾತ ಜವಳಿ ಉದ್ಯಮಿ ಎಂ. ಸಂಜೀವ ಶೆಟ್ಟಿ ನಿಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.30. ಖ್ಯಾತ ಜವಳಿ ಉದ್ಯಮಿ, ಹಲವು ದಶಕಗಳಿಂದ ಪುತ್ತೂರಿನಲ್ಲಿ ಮನೆಮಾತಾಗಿರುವ ಎಂ. ಸಂಜೀವ ಶೆಟ್ಟಿ ಎದೆನೋವಿನಿಂದಾಗಿ ಮಂಗಳವಾರ ಬೆಳಗ್ಗಿನ ಜಾವ ನಿಧನರಾದರು.

ಹಲವು ದಶಕಗಳ ಹಿಂದೆ ಪುತ್ತೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಬಟ್ಟೆ ಅಂಗಡಿಯನ್ನು ತೆರೆಯುವುದರ ಮೂಲಕ ಜವಳಿ ಉದ್ಯಮಕ್ಕೆ ಕಾಲಿಟ್ಟಿದ್ದ ಇವರು ನಂತರದ ದಿನಗಳಲ್ಲಿ ಪುತ್ತೂರು ಹಾಗೂ ಮಂಗಳೂರಿನಲ್ಲಿ ಮದುವೆ ವಸ್ತ್ರಗಳ ಬೃಹತ್ ಭಂಡಾರವನ್ನೇ ತೆರೆದಿದ್ದರು. ಸದಾ ಲವಲವಿಕೆಯಿಂದ ಇರುತ್ತಿದ್ದ ಇವರು ತನ್ನ ಇಳಿವಯಸ್ಸಿನಲ್ಲೂ ಮಳಿಗೆಗೆ ಆಗಮಿಸಿ ಗ್ರಾಹಕರ ಜೊತೆ ಸ್ವತಃ ವ್ಯಾಪಾರ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗಿನ ಜಾವ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಹಾದಿ ಮಧ್ಯೆ ಮೃತಪಟ್ಟಿದ್ದಾರೆ.

Also Read  ಆತ್ಮಹತ್ಯೆಗೆ ಮುನ್ನ ಪತ್ನಿ, ಪುತ್ರಿಯರ ಶವದೊಂದಿಗೆ ಮೂರು ದಿನ ಕಳೆದ ಟೆಕ್ಕಿ

error: Content is protected !!
Scroll to Top