ಕಡಬ: ಅಸಂತಡ್ಕ ಕಾಲೋನಿಗೆ ನೀರಿನ ವ್ಯವಸ್ಥೆ, ರಸ್ತೆ ಕಾಂಕ್ರಿಟೀಕರಣಗೊಳಿಸುವಂತೆ ಶಾಸಕರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಅ.27. ಕೋಡಿಂಬಾಳ ಗ್ರಾಮದ ಅಸಂತಡ್ಕ ಪರಿಶಿಷ್ಟ ಕಾಲೋನಿಗೆ ಗಂಗಾ ಕಲ್ಯಾಣ ಯೋಜನೆಯಡಿ ನೀರಿನ ವ್ಯವಸ್ಥೆ ಹಾಗೂ ಅಸಂತಡ್ಕ ಕಾಲೋನಿ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವಂತೆ ಅಲ್ಲಿನ ನಿವಾಸಿಗಳು ಕಡಬ ಗ್ರಾ.ಪಂ.ಸದಸ್ಯೆ ನೇತ್ರಾ ರವರ ನೇತೃತ್ವದಲ್ಲಿ ಅ.25 ರಂದು ಶಾಸಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಎಸ್.ಅಂಗಾರರಿಗೆ ಮನವಿ ಸಲ್ಲಿಸಿದರು.

ಕಡಬದಲ್ಲಿ ನಡೆದ ಶಾಸಕ ಎಸ್.ಅಂಗಾರರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅಸಂತಡ್ಕ ಪರಿಶಿಷ್ಟ ಕಾಲೋನಿಯನ್ನು ಹಾಗೂ ಅಲ್ಲಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಶ್ರೀ ನಾಗಕನ್ನಿಕೆ, ರಕ್ತೇಶ್ವರಿ ಸನ್ನಿಧಿಯನ್ನು ಸಂಪರ್ಕಿಸುವ ರಸ್ತೆ ಕಾಂಕ್ರಿಟೀಕರಣಗೊಳಿಸುವಂತೆ ಹಾಗೂ ಅಸಂತಡ್ಕ ಕಾಲೋನಿಯ ನಿವಾಸಿಗಳ ಕೃಷಿ ಹಾಗೂ ಕುಡಿಯುವ ನೀರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕಾಮಗಾರಿ ನಡೆಸಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾದವ ದಂಡುಗುರಿ, ರೋಹಿತ್ ಅಸಂತಡ್ಕ, ನವೀನ್ ಅಸಂತಡ್ಕ, ಮೋಹನ್ ಅಸಂತಡ್ಕ, ತನಿಯಪ್ಪ ಅಸಂತಡ್ಕ, ಶ್ರೀದರ ಚೆಂಡುಪಾದೆ ಸೇರಿದಂತೆ ಆ ಭಾಗದ ನಿವಾಸಿಗಳು ಉಪಸ್ಥಿತರಿದ್ದರು.

Also Read  ಪಾಸ್ ಇಲ್ಲವೆಂದು ವಿದ್ಯಾರ್ಥಿಯನ್ನು ಅರ್ಧದಲ್ಲೇ ಇಳಿಸಿ ಅವಮಾನಿಸಿದ ನಿರ್ವಾಹಕ: ಆರೋಪ

error: Content is protected !!
Scroll to Top