ಫೈನಾನ್ಸಿಯಲ್ ಬಿಡ್ ತೆರೆಯಲು ಲಂಚ ಸ್ವೀಕಾರ ► ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.27. ಶೌಚಾಲಯ ನಿರ್ಮಾಣ ಕಾಮಗಾರಿಯ ಫೈನಾನ್ಸಿಯಲ್ ಬಿಡ್ ತೆರೆಯಲು ಟೆಂಡರ್ ಮೊತ್ತದಲ್ಲಿ 25 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದ ಘಟನೆ ಮಂಗಳೂರಿನ ಸೂಪರಿಂಟೆಂಡಿಂಗ್ ಇಂಜಿನಿಯರಿಂಗ್ ಕಚೇರಿಯಲ್ಲಿ ಶುಕ್ರವಾರದಂದು ನಡೆದಿದೆ.

ಬಂಧಿತ ಅಧಿಕಾರಿಗಳನ್ನು ಸಹಾಯಕ ಇಂಜಿನಿಯರ್ ಸೂರ್ಯ ನಾರಾಯಣ್ ಭಟ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಸುಧೀನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಚಿಕ್ಕಮಗಳೂರಿನ ಕಳಸ ಎಂಬಲ್ಲಿ ಕಟ್ಟಡ ಕಾಮಗಾರಿಯ ಟೆಂಡರ್‌ಗೆ (52.58 ಲಕ್ಷ) ಫೈನಾನ್ಸಿಯಲ್ ಬಿಡ್ ತೆರೆಯಲು ಮೂಡಿಗೆರೆ ತಾಲೂಕಿನ ಬಾಪುನಗರದ ಅಬೂಬಕರ್ ಎಂಬವರ ಪುತ್ರ ಆದಂ ಎಂಬವರಿಂದ 25 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ತಾಂತ್ರಿಕ ಸಹಾಯಕ ಸೂರ್ಯನಾರಾಯಣ್ ಭಟ್ ಬ್ಯಾಗ್‌ನಲ್ಲಿ ಹೆಚ್ಚುವರಿಯಾಗಿ 26 ಸಾವಿರ ರೂ. ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ‌.

Also Read  ಅನಿಲ ಟ್ಯಾಂಕರ್ ಗಳ ಅಸುರಕ್ಷಿತ ಚಾಲನೆಗೆ ಕಡಿವಾಣ ಹಾಕಬೇಕು ➤ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ. ವಿ

ಕಾರ್ಯಾಚರಣೆಯಲ್ಲಿ ಎಸಿಬಿ ಎಸ್ಪಿ ಶ್ರುತಿ ಎನ್.ಎಸ್., ಡಿವೈಎಸ್ಪಿ ಸುಧೀರ್ ಎಂ.ಹೆಗ್ಡೆ, ಉಡುಪಿ ಡಿವೈಎಸ್ಪಿ ದಿನಕರ್ ಶೆಟ್ಟಿ, ಇನ್ಸ್‌ಪೆಕ್ಟರ್ ಯೊಗೀಶ್‌ ಕುಮಾರ್ ಬಿ.ಸಿ., ಸಿಬ್ಬಂದಿಗಳಾದ ರಾಧಾಕೃಷ್ಣ ಡಿ.ಎ, ಹರಿಪ್ರಸಾದ್, ಪ್ರಶಾಂತ್, ಉಮೇಶ್, ರಾಮಕೃಷ್ಣ ಕೆ., ವೈಶಾಲಿ, ರಾಕೇಶ್ ವಾಗ್ಮನ್, ಗಣೇಶ್, ರಾಜೇಶ್, ಸುರೇಶ್ ನಾಯಕ್ ಭಾಗವಹಿಸಿದ್ದರು.

error: Content is protected !!
Scroll to Top