ನೀತಿ ತಂಡದ ಕಡಬ ಸಮಿತಿ ಅಧ್ಯಕ್ಷರಾಗಿ ರಂಜಿತ್ ಎಂ.ಎ. ಆಯ್ಕೆ ► ಕಾರ್ಯದರ್ಶಿಯಾಗಿ ನವೀನ್ ಗೋಖಲೆ

(ನ್ಯೂಸ್ ಕಡಬ) newskadaba.com ಕಡಬ, ಅ.24. “ಸ್ಥಳೀಯವಾಗಿ ಜನರನ್ನು ಶಕ್ತೀಕರಿಸಿ, ತಯಾರು ಗೊಳಿಸಿ, ನಿರೀಕ್ಷೆ ಮತ್ತು ಸಂವಹನಾ ಶಕ್ತಿ ನೀಡುವ ತಂಡ” ಎಂಬ ಧ್ಯೇಯವಾಕ್ಯದೊಂದಿಗೆ ಇಚಿಲಂಪಾಡಿಯಲ್ಲಿ ಪ್ರಥಮ ನೋಂದಾಯಿತ ಶಾಖೆಯೊಂದಿಗೆ ಆರಂಭವಾದ ನೀತಿ ತಂಡದ ಕಡಬ ಗ್ರಾಮ ಸಮಿತಿಯ 2018-19ನೇ ಸಾಲಿನ ಅಧ್ಯಕ್ಷರಾಗಿ ಅನುಗ್ರಹ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಲಕರಾದ ರಂಜಿತ್ ಎಂ‌.ಎ. ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಟೋನಿ ಮಾಥ್ಯೂ, ಕಾರ್ಯದರ್ಶಿಯಾಗಿ ನವೀನ್ ಗೋಖಲೆ, ಕೋಶಾಧಿಕಾರಿಯಾಗ ಆಸೀಫ್ ಮತ್ತು ಸಮಿತಿಯ ಸದಸ್ಯರಾಗಿ ಜೋಬಿನ್ ವಿ.ಜೆ., ತೋಮಸ್ ಕೆ.ಜೆ., ನಯನ್ ಎಂ.ಜೆ., ಅಖಿಲ್ ರೆಜಿ, ರಿಜೋ ಕೆ.ಸಿ., ರೋಬಿನ್ ವಿ.ಜೆ. ಇವರನ್ನು ನಿಯೋಜಿಸಲಾಯಿತು. ನೀತಿ ತಂಡದ ರಾಜ್ಯಾಧ್ಯಕ್ಷರಾದ ಶ್ರೀ ಜಯನ್ ಟಿ, ಕಾರ್ಯದರ್ಶಿ ಜ್ಯೆಸನ್ ಜಾರ್ಜ್, ಕೋಶಾಧಿಕಾರಿ ಸುಜಿತ್ ಸಿ. ಫಿಲಿಪ್ ಮೊದಲಾದವರು ಹೊಸ ತಂಡವನ್ನು ಸ್ವಾಗತಿಸಿದರು.

Also Read  ಕಡಬ: ಹತ್ತನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

error: Content is protected !!
Scroll to Top