ಬಿಗ್ ಬಾಸ್ ಆರನೇ ಆವೃತ್ತಿಗೆ ನಿರ್ಣಾಯಕ ಎಂಟ್ರಿ ಕೊಟ್ಟ ಪುತ್ತೂರಿನ ಮುತ್ತು ► ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಈ ಬೆಡಗಿಯ ಬಗ್ಗೆ ಗೊತ್ತೇ..?

(ನ್ಯೂಸ್ ಕಡಬ) newskadaba.com ಪುತ್ತೂರು, ಅ.24. ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿಸಲು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಫ್ಟ್‌ವೇರ್ ಉದ್ಯೋಗಿಯೋರ್ವರು ನಿರ್ಣಾಯಕ ಎಂಟ್ರಿ ಪಡೆದಿದ್ದಾರೆ.

ಪುತ್ತೂರಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಅವಕಾಶ ಪುತ್ತೂರಿನ ಎಪಿಎಂಸಿ ನಿವಾಸಿ ರಿಚರ್ಡ್(ರಾಯಲ್) ಡಾಯಸ್ ಹಾಗೂ ಪಾಟ್ರಕೋಡಿ ಶಾಲೆಯ ಶಿಕ್ಷಕಿ ಲತಾ ಗ್ಲೇಡಿಸ್ ದಂಪತಿಯ ಪುತ್ರಿ ರೀಮಾ ಲರಿಸ್ಸಾ ಡಾಯಸ್ ಆಯ್ಕೆಯಾದ ಬೆಡಗಿ. ಪ್ರಾಥಮಿಕ ಶಿಕ್ಷಣವನ್ನು ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದ ಈಕೆ ಪ್ರೌಢಶಿಕ್ಷಣವನ್ನು ಮಾಣಿ ಬಾಲವಿಕಾಸ ಪ್ರೌಢಶಾಲೆಯಲ್ಲಿ ಮುಗಿಸಿ ಪಿಯುಸಿ ವಿದ್ಯಾಭ್ಯಾಸವನ್ನು ಅಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ಇಂಜಿನಿಯರ್ ಶಿಕ್ಷಣವನ್ನು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಪೂರೈಸಿ ಪ್ರಸ್ತುತ ಬೆಂಗಳೂರಿನ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Also Read  ಗೃಹಲಕ್ಷ್ಮೀ ಹಣ ಬಿಡುಗಡೆ ಬಗ್ಗೆ ಸಚಿವೆ ಹೆಬ್ಬಾಳಕರ್ ಮಹತ್ವದ ಮಾಹಿತಿ

ಚಿಕ್ಕಂದಿನಿಂದಲೂ ಓದಿನಲ್ಲಿ ಮುಂದಿದ್ದ ಈಕೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸೈ ಎನಿಸಿಕೊಂಡವರು. ಪುತ್ತೂರಿನ ಮಾಯಿದೆ ದೇವುಸ್ ಚರ್ಚ್‌ನ ಐಸಿವೈಎಂ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿಯೂ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಇದೀಗ ಬಿಗ್ ಬಾಸ್ ಆರನೇ ಆವೃತ್ತಿಗೆ ಆಯ್ಕೆಗೊಂಡಿದ್ದು, ಪುತ್ತೂರಿನ ಮುತ್ತು ರೀಮಾರವರನ್ನು ನಾವೆಲ್ಲಾ ಪ್ರೋತ್ಸಾಹಿಸಬೇಕಾಗಿದೆ.

error: Content is protected !!
Scroll to Top