ಶಬರಿಮಲೆ ಕ್ಷೇತ್ರದ ಪಾವಿತ್ರ್ಯ ಉಳಿಸಿ ► ಇಂದು ಕಡಬದಲ್ಲಿ ಬೃಹತ್ ಜನಜಾಗೃತಿ ಸಭೆ – ಮೆರವಣಿಗೆ

(ನ್ಯೂಸ್ ಕಡಬ) newskadaba.com ಕಡಬ, ಅ.21. ಶಬರಿಮಲೆ ಕ್ಷೇತ್ರಕ್ಕೆ 10 ರಿಂದ 50 ವರ್ಷದ ಒಳಗಿನ ಮಹಿಳೆಯರೂ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಮರು ಪರಿಶೀಲನೆ ಮಾಡುವಂತೆ ಆಗ್ರಹಿಸಿ “ಶಬರಿಮಲೆ ಕ್ಷೇತ್ರದ ಪಾವಿತ್ರ್ಯ ಉಳಿಸಿ” ಎಂದು ಮೆರವಣಿಗೆಯೊಂದಿಗೆ ಬೃಹತ್ ಜನಜಾಗೃತಿ ಸಭೆಯು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಇಂದು ಪೂರ್ವಾಹ್ನ ನಡೆಯಲಿದೆ.

ಬೆಳಿಗ್ಗೆ ಕಡಬ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನಕ್ಕೆ ಬೃಹತ್ ಮೆರವಣಿಗೆ ನಡೆಯಲಿದ್ದು ಬಳಿಕ ಅಲ್ಲಿ ಜನಜಾಗೃತಿ ಸಭೆ ನಡೆಯಲಿದೆ. ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಅಯ್ಯಪ್ಪ ಧರ್ಮಶಿಖರ ಗೋಳಿಯಡ್ಕ ಇಲ್ಲಿನ ಗುರುಸ್ವಾಮಿ ರವೀಂದ್ರನ್ ಅವರು ವಹಿಸಲಿದ್ದು, ದುರ್ಗಾ ವಾಹಿನಿ ಸಂಯೋಜಕಿ ಮಂಗಳೂರು ವಿಭಾಗದ ಶ್ರೀಮತಿ ವಿದ್ಯಾ ಮಲ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಅಯ್ಯಪ್ಪ ಭಕ್ತ ಸಮಿತಿಯ ಅಧ್ಯಕ್ಷ ಮನೋಹರ್ ರೈ ಬೆದ್ರಾಜೆ, ಕಾರ್ಯದರ್ಶಿ ವಿಜಯ ಕುಮಾರ್ ಕಡಬ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ

Also Read  ತುಳುನಾಡ ಸಿರಿ ಮದಿಪು - 2020

error: Content is protected !!
Scroll to Top