►► Shocking News ಪುತ್ತೂರು: ಮನೆಮಂದಿ ಮಲಗಿದ್ದ ವೇಳೆ ಮನೆಗೆ ಸ್ಫೋಟಕ ಇಟ್ಟ ದುಷ್ಕರ್ಮಿಗಳು ► ಸ್ಫೋಟಕ ಸಿಡಿದು ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.16. ಜಿಲೆಟಿನ್ ಸ್ಫೋಟಕ ಬಳಸಿ ಮನೆಯನ್ನು ಸ್ಫೋಟಿಸಿದ ಪರಿಣಾಮ ಮನೆ ಮಂದಿ ಗಂಭೀರ ಗಾಯಗೊಂಡ ಘಟನೆ ಕಬಕ ಸಮೀಪದ ಪೋಳ್ಯದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಸೋಮವಾರ ತಡರಾತ್ರಿ ಪೋಳ್ಯ ನಿವಾಸಿ ನಾರಾಯಣ ಪ್ರಸಾದ್ ಎಂಬವರ ಮನೆಯ ಹೊರಗಡೆ ಯಾರೋ ನಡೆದಾಡುತ್ತಿರುವ ಶಬ್ದ ಕೇಳಿ ಮನೆಮಂದಿ ಎಚ್ಚರಗೊಂಡಿದ್ದು, ಲೈಟ್ ಹಾಕಿ ಬಾಗಿಲು ತೆರೆಯುವಷ್ಟರಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಸ್ಫೋಟಕಕ್ಕೆ ಬೆಂಕಿ ಕೊಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಫೋಟಕ ಸಿಡಿದಿದ್ದು, ಘಟನೆಯಲ್ಲಿ ನಾರಾಯಣ ಪ್ರಸಾದ್ ಮತ್ತು ಅವರ ಪತ್ನಿ ಶಾಲಿನಿ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉದ್ದೇಶಪೂರ್ವಕವಾಗಿ ಯಾರೋ ದುಷ್ಕರ್ಮಿಗಳು ಸ್ಫೋಟಕವನ್ನು ಇಟ್ಟು ಮನೆಯನ್ನು ಸ್ಫೋಟಿಸಲು ಯತ್ನಿಸಿದ್ದು, ಸ್ಥಳಕ್ಕೆ ಪುತ್ತೂರು ನಗರ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.

Also Read  ವಿದ್ಯಾರ್ಥಿ ನಾಯಕರನ್ನು 250 ದಿನಗಳ ಕಾಲ ಅನ್ಯಾಯವಾಗಿ ಜೈಲಿನಲ್ಲಿರಿಸಿದ ಹಿನ್ನೆಲೆ ➤ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾದ್ಯಂತ ಪ್ರತಿಭಟನೆ

error: Content is protected !!
Scroll to Top