ಆಲಂಕಾರು: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಅ.15. ಠಾಣಾ ವ್ಯಾಪ್ತಿಯ ಶರವೂರು ಕರಂದ್ಲಾಜೆ ಎಂಬಲ್ಲಿನ ಸರಕಾರಿ ಗೇರು ತೋಟದಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಆಲಂಕಾರು ಗ್ರಾಮದ ನಗ್ರಿ ನಿವಾಸಿ ಕುಶಾಲಪ್ಪ ದೇವಾಡಿಗ ಎಂಬವರ ಪುತ್ರ ವಿನಯ ದೇವಾಡಿಗ(32) ಎಂದು ಗುರುತಿಸಲಾಗಿದೆ. ವಿಪರೀತ ಮದ್ಯ ವ್ಯಸನಿಯಾಗಿದ್ದ ವಿನಯ್ ಅವಿವಾಹಿತರಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಶರವೂರು ಸರಕಾರಿ ಗೇರು ತೋಟದಲ್ಲಿ ಗೇರು ಮರದ ಗೆಲ್ಲಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಮಾವ ಶಿವಾನಂದ ದೇವಾಡಿಗ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  13ನೇ ಸಾಂಖ್ಯಿಕ ದಿನಾಚರಣೆ ಹಾಗೂ ➤ ಸಂಖ್ಯಾಶಾಸ್ತ್ರದ ಪಿತಾಮಹ ಪ್ರೊ.ಪಿ.ಸಿ.ಮಹಾಲನೋಬಿಸ್ರವರ 125ನೇ ಜನ್ಮ ದಿನಾಚರಣೆ

error: Content is protected !!
Scroll to Top