ಮುಂದೊಂದು ದಿನ ಕುಮಾರಸ್ವಾಮಿ ಭಾರತದ ರಾಷ್ಟ್ರಪತಿ ಆಗಲಿದ್ದಾರೆ ► ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಭವಿಷ್ಯ

(ನ್ಯೂಸ್ ಕಡಬ) newskadaba.com
ಮಂಗಳೂರು, ಅ.15. ಮುಂದೊಂದು ದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ದೇಶದ ರಾಷ್ಟ್ರಪತಿ ಆಗಲಿದ್ದು, ಆ ಸಮಯದಲ್ಲಿ ತಾನು ಇರಲಾರೆ ಎಂದು ಕಾಂಗ್ರೆಸ್​ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಭವಿಷ್ಯ ನುಡಿದಿದ್ದಾರೆ.

ಭಾನುವಾರದಂದು ಮಂಗಳೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಮಾತನಾಡಿದ ಅವರು, ದೇವೇಗೌಡರು ದೇಶದ ಪ್ರಧಾನಿಯಾಗಿದ್ದರು. ಆದರೆ ಎಲ್ಲರಿಗೂ ಪ್ರಧಾನಿಯಾಗಲು ಸಾಧ್ಯವಿಲ್ಲ. ಪೂರ್ವಜರ ಪುಣ್ಯವಿದ್ದಲ್ಲಿ ಮಾತ್ರ ಅದು ಸಾಧ್ಯ‌ ಇದೀಗ ದೇವೇಗೌಡರ ಸುಪುತ್ರ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಮುಂದೊಂದು ದಿನ ಕುಮಾರಸ್ವಾಮಿ ಭಾರತದ ರಾಷ್ಟ್ರಪತಿಯಾಗುವುದು ಖಂಡಿತ. ಆದರೆ ಕುಮಾರಸ್ವಾಮಿ ರಾಷ್ಟ್ರಪತಿಯಾಗುವ ವೇಳೆ ನಾನಿರಲ್ಲ. ರಾಷ್ಟ್ರಪತಿಯಾಗುವ ಸಂದರ್ಭದಲ್ಲಿ ಈ ಬಗ್ಗೆ ಪೂಜಾರಿ ಭವಿಷ್ಯ ನುಡಿದಿದ್ದ ಎಂದು ನೆನಪಿಸಿಕೊಳ್ಳಲಿ ಎಂದರು.

Also Read  ಉಳ್ಳಾಲ: ಸಮುದ್ರ ತೀರದಲ್ಲಿ ಟ್ರಾಲ್‌ಬೋಟ್ ಅವಘಡ.! ➤ 8 ಮೀನುಗಾರರ ರಕ್ಷಣೆ

error: Content is protected !!
Scroll to Top