ಕಡಬ ಪಿಲತ್ತೋಡಿಯಲ್ಲಿ ವಿದ್ಯುತ್ ಪರಿವರ್ತಕ ಉದ್ಘಾಟನೆ

(ನ್ಯೂ ಸ್ ಕಡಬ) newskadaba.com
ಕಡಬ,ಅ.14. ಕಡಬ ಮೆಸ್ಕಾಂ ವತಿಯಿಂದ ಕಳಾರ ಪಿಲತ್ತೋಡಿ ಎಂಬಲ್ಲಿ ಹೊಸ ಟಿ.ಸಿ.ಯೊಂದನ್ನು ಶನಿವಾರದಂದು ಅಳವಡಿಸುವ ಮೂಲಕ ಆ ಭಾಗದ ಸುಮಾರು 20 ಕುಟುಂಬಗಳ ವಿದ್ಯುತ್ ಪಂಪು ಹಾಗೂ ಕಟ್ಟಡಗಳ ವಿದ್ಯುತ್ ಸಮಸ್ಯೆಯನ್ನು ನಿವಾರಿಸಲಾಯಿತು.

ಈ ಭಾಗದ ರೈತರು ಹಾಗೂ ವಿದ್ಯುತ್ ಫಲಾನುಭವಿಗಳು ನಿರಂತರ ವಿದ್ಯುತ್ ಸಮಸ್ಯೆಯಿಂದ ತೊಂದರೆ ಅನಿಭವಿಸುತ್ತಿದ್ದು, ಚಿಮಿಣಿಯಂತೆ ಉರಿಯುತ್ತಿದ್ದ ಬಲ್ಬುಗಳಿಂದ ಮಕ್ಕಳಿಗಂತೂ ಓದಲೂ ಸಾಧ್ಯವಾಗದೆ ಸಮಸ್ಯೆಯಾಗಿದ್ದರೆ, ಕೃಷಿಕರಿಗೆ ಪಂಪುಗಳು ರನ್ ಆಗದೆ ರೈತರು ಕಂಗಾಲಾಗಿದ್ದರು. ಗ್ರಾಮಸ್ಥರ ಬೇಡಿಕೆ ಹಾಗೂ ಒತ್ತಾಯ ಪ್ರಕಾರ ಸ್ಥಳೀಯ ಗ್ರಾ.ಪಂ.ಸದಸ್ಯ ಹನೀಫ್ ಕೆ.ಎಂ.ರವರು ಅಧಿಕಾರಿಗಳು ಹಾಗೂ ಜಿ.ಪಂ., ತಾ.ಪಂ.ಸದಸ್ಯರಲ್ಲಿ ನಿರಂತರ ಒತ್ತಡ ತರುತ್ತಿದುದ್ದಲ್ಲದೆ ಈ ಪಿಲತ್ತೋಡಿ ಪ್ರದೇಶದಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಿ ವಿದ್ಯುತ್ ಸಮಸ್ಯೆ ನಿವಾರಿಸುವವರೆಗೆ ವಿರಮಿಸುವುದಿಲ್ಲವೆಂದು ಗ್ರಾಮಸ್ಥರಿಗೆ ಭರವಸೆ ನೀಡಿ, ನಿರಂತರ ಅಧಿಕಾರಿಗಳನ್ನು ಒತ್ತಾಯಿಸುತ್ತಾ ಬಂದಿರುತ್ತಾರೆ. ಅದೇ ರೀತಿ ಜಿ.ಪಂ. ಸದಸ್ಯರಲ್ಲೂ ಇಲ್ಲಿಗೆ ಟಿ.ಸಿ.ಅಳವಡಿಸುವಂತೆ ಕಾದಾಟವನ್ನೇ ಮಾಡಿದ್ದರು. ಅವರ ಒತ್ತಡಕ್ಕೆ ಸ್ಪಂದಿಸಿ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ರವರು ಪದೇ ಪದೇ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಟಿಸಿ ಅಳವಡಿಸುವಂತೆ ಆಗ್ರಹಿಸಿದ್ದರು. ಎಲ್ಲರ ಬೇಡಿಕೆಯಂತೆ ಪಿಲತೋಡಿಯಲ್ಲಿ ಅಳವಡಿಸಿದ ಟಿಸಿಯನ್ನು ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್‌ರವರು ದೀಪಬೆಳಗಿಸಿ ವಿದ್ಯುತ್ ಚಾಲನೆ ನೀಡುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.

Also Read  ಕಡಬ: 162 ಮಂದಿಗೆ ಹೋಂ ಕ್ವಾರಂಟೈನ್

ಪಿಲತ್ತೋಡಿ ಹಿರಿಯ ಪ್ರಗತಿಪರ ಕೃಷಿಕ ದೇಜಪ್ಪ ಪೂಜಾರಿ ಪಿಲತ್ತೋಡಿ ತೆಂಗಿನಕಾಯಿ ಒಡೆದು ನಿರ್ವಿಘ್ನವಾಗಿ ನಿರಂತರ ವಿದ್ಯುತ್ ದೊರೆಯಲೆಂದು ಪ್ರಾರ್ಥಿಸಿದರು. ತಾ.ಪಂ.ಸದಸ್ಯ ಗಣೇಶ್ ಕೈಕುರೆ ಮಾತನಾಡಿದರು. ಮೆಸ್ಕಾಂ ಕಡಬ ವಿಭಾಗೀಯ ಇಂಜಿನೀಯರ್ ಸಜಿಕುಮಾರ್, ಕಡಬ ಸಹಾಯಕ ಇಂಜಿನೀಯರ್ ಸತ್ಯನಾರಾಯಣ, ಕಡಬ ಗ್ರಾ.ಪಂ.ಸದಸ್ಯರಾದ ಸಿ.ಜೆ.ಸೈಮನ್, ಶಾಲಿನಿ ಸತೀಶ್ ನಾಯಕ್, ನೀಲಾವತಿ ಶಿವರಾಂ, ಎ.ಎಸ್.ಷರೀಫ್, ಕಡಬ ಶ್ರೀದುರ್ಗಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಚಂದ್ರಶೇಖರ ಕರ್ಕೇರ, ಪ್ರಮುಖರಾದ ಡೆನಿಸ್ ಫೆರ್ನಾಂಡಿಸ್, ಅಬ್ದುಲ್ ರಹಿಮಾನ್ ಅಡ್ಯಾಡಿ, ಉಸ್ಮಾನ್ ತಿಮರಡ್ಕ, ಗಣೇಶ್ ಪಿಲತ್ತೋಡಿ, ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯ ಹನೀಫ್ ಕೆ.ಎಂ.ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು.

Also Read  ಎಪಿಎಂಸಿ ನಾಮನಿರ್ದೇಶಿತ ಸದಸ್ಯರಾಗಿ ರಾಮಕೃಷ್ಣ ಹೊಳ್ಳಾರ್ ನೇಮಕ

error: Content is protected !!
Scroll to Top