ಕಡಬ: ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ► ಮೋದಿ ದುರಾಡಳಿತದ ವಿರುದ್ಧ ಮತದಾರರನ್ನು ಜಾಗೃತಗೊಳಿಸಿ – ರಮಾನಾಥ ರೈ

(ನ್ಯೂಸ್ ಕಡಬ) newskadaba.com ಕಡಬ, ಅ.11. ಕೇಂದ್ರ ಸರಕಾರದ ನರೇಂದ್ರ ಮೋದಿ ಸರಕಾರದ ದುರಾಡಳಿತ ಬಗ್ಗೆ ಪ್ರತೀ ಬೂತ್ ಮಟ್ಟದಲ್ಲಿ ಮತದಾರನನನು ಜಾಗೃತಗೊಳಿಸುವ ಕೆಲಸವನ್ನು ಬೂತ್ ಮಟ್ಟದ ಅಧ್ಯಕ್ಷ, ಪದಾಧಿಕಾರಿಗಳು, ಕಾರ್ಯಕರ್ತರು ಒಟ್ಟಾಗಿ ಹತ್ತು ಜನ ಸೇವಾಯೋಗಿಗಳ ತಂಡವನ್ನು ರಚಿಸುವ ಮೂಲಕ ಪ್ರತೀ ಮನೆ ಮನೆಗೆ ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಸವನ್ನು ಮಾಡಬೇಕಾಗಿದೆ ಎಂದು ಮಾಜಿ ಜಿಲ್ಲಾ ಸಚಿವ ರಮಾನಾಥ ರೈ ಯವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಅವರು ಅ.10ರಂದು ಕಡಬ ಅನುಗ್ರಹ ಸಭಾಭವನದಲ್ಲಿ ನಡೆದ ಕಡಬ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ, ಕಾರ್ಯಕರ್ತರ ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಗೆ ಪೂರ್ವ ತಯಾರಿಯಾಗಿ ದೇಶಾದ್ಯಂತ ಲೋಕ ಸಂಪರ್ಕ ಯಾತ್ರೆಯ ಅಭಿಯಾನ ಕೈಗೊಳ್ಳಲಾಗಿದ್ದು ದೇಶದಲ್ಲಿ ಕಳೆದ ನಾಲ್ಕುವರೆ ವರ್ಷದಿಂದ ಆಡಳಿತ ನಡೆಸುವ ನರೇಂದ್ರ ಮೋದಿ ಸರಕಾರದಿಂದ ದೇಶಾದ್ಯಂತ ತೈಲ ಬೆಲೆ, ಗ್ಯಾಸ್ ಸೇರಿದಂತೆ ದಿನನಿತ್ಯದ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದ್ದು ಜನರು ಇನ್ನಿಲ್ಲದ ಸಂಕಷ್ಟಕ್ಕೊಳಗಾಗಿದ್ದಾರೆ. ಅದೆಷ್ಟೋ ವರ್ಷಗಳಿಂದ ಈ ದೇಶವನ್ನಾಳಿದ ಕಾಂಗ್ರೆಸ್ ಸರಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದು ದೀನ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲರ ಹಿತ ಕಾಯುವಲ್ಲಿ ಜಾತ್ಯಾತೀತ ನಿಲುವಿನೊಂದಿಗೆ ಶ್ರಮಪಟ್ಟಿದ್ದರೆ ಕೇವಲ ನಾಲ್ಕುವರೆ ವರ್ಷಗಳಲ್ಲಿ ಆಡಳಿತ ನಡೆಸಿದ ನರೇಂದ್ರ ಮೋದಿ ಸರಕಾರ ಸಂಪೂರ್ಣ ಆಡಳಿತ ವೈಫಲ್ಯವನ್ನು ಕಂಡಿದ್ದು ಮತದಾರರಿಗೆ ಇನ್ನೆಂದು ಬೇಡವಾದ ರೀತಿಯಲ್ಲಿ ಅಧಿಕಾರ ಚಲಾಯಿಸಿದ್ದು ಮತದಾರರು ಜಾಗೃತರಾಗುವ ಕಾಲ ಬಂದಿರುತ್ತದೆ. ಇಂತಹ ಈ ಸಂದರ್ಭದಲ್ಲಿ ಪ್ರತೀ ಬೂತ್ ಮಟ್ಟದಲ್ಲಿ ಸರಕಾರದ ವಿರುದ್ದ ಜನ ಜಾಗೃತಿ ಮೂಡಿಸಲು ಪ್ರತೀ ಗ್ರಾಮದ ಬೂತ್ ಮಟ್ಟದಲ್ಲಿ ಒಬ್ಬ ಅಧ್ಯಕ್ಷ ಕಾರ್ಯದರ್ಶಿ ಸಮೇತ 10 ಮಂದಿ ಸೇವಾ ಯೋಗಿಗಳನ್ನು ನೇಮಿಸಿ ಕೇಂದ್ರದ 5 ವರ್ಷಗಳ ಆಡಳಿತ ವೈಫಲ್ಯಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಕಾರ್ಯಗಳು ನಡೆಯಬೇಕಾಗಿದೆ ಎಂದರು.

Also Read  ಬಂಟ್ವಾಳ: ಆಟೋ ರಿಕ್ಷಾ ಅಪಘಾತ ➤ ಮಹಿಳೆ ಗಂಭೀರ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಮಾತನಾಡಿ, ಹಿಂದಿನ ಯುಪಿಎ ಸರಕಾರ ದೇಶ ರಕ್ಷಣೆಗಾಗಿ ರಫೆಲ್ ಯುದ್ದ ವಿಮಾನ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದು ಈಗೀನ ಬಿಜೆಪಿ ಕೇಂದ್ರ ಸರಕಾರ ಬೇಡಿಕೆಗಿಂತ ಹೆಚ್ಚಿನ ವಿಮಾನಗಳನ್ನು ಮೂರು ಪಟ್ಟು ಹೇರಿಕೆಯೊಂದಿಗೆ ಕರಾರು ಮಾಡುವ ಮೂಲಕ ಬಹುದೊಡ್ಡ ರಫೇಲ್ ಹಗರಣ ನಡೆಸಿದ್ದು ದೇಶಕ್ಕೆ ದ್ರೋಹ ಬಗೆಯುವ ಮೂಲಕ ತನ್ನ ಸಾಚ ದೋರಣೆಯನ್ನು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ದೇಶಾದ್ಯಂತ ರೈತಾಪಿ ವರ್ಗದವರು ಮಾಡಿದ ಸಾಲವನ್ನು ಅಂದಿನ ಯುಪಿಎ ಸರಕಾರ 72 ಸಾವಿರ ಕೋಟಿ ರೂ. ಮನ್ನಾ ಮಾಡಿ ರೈತರ ಕಣ್ಣೊರೆಸಿದ್ದರೆ, ಮೋದಿ ಸರಕಾರ ಬಂದು ರೈತರಿಗೆ ಒಂದು ರೂಪಾಯಿ ಕೂಡ ಸಾಲ ಮನ್ನಾ ಮಾಡದೇ, ದೊಡ್ಡ ದೊಡ್ಡ ಉದ್ಯಮಿಗಳನ್ನು ಸಂತುಷ್ಟ ಪಡಿಸಲು ಮುಂದಾಗಿರುವುದು ದುರಾದೃಷ್ಟಕರ ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಹಿಂದಿನ ಸಿದ್ರಾಮಯ್ಯ ಸರಕಾರ 50 ಸಾವಿರ ಸಾಲ ಮನ್ನಾ ಮಾಡಿದ್ದರೆ, ಈಗೀನ ಸಮ್ಮಿಶ್ರ ಸರಕಾರ ಒಂದು ಲಕ್ಷದ ವರೆಗೆ ಸಾಲ ಮನ್ನಾ ಮಾಡಿ ಜನರ ಪರ ಇರುವ ಸರಕಾರ ಎಂದು ತೋರಿಸಿಕೊಟ್ಟಿದೆ. ಆದರೆ ನಾವು ಕಾಂಗ್ರೆಸ್ ನವರು ಮತದಾರರಿಗೆ ಸರಕಾರದ ಸೌಲಭ್ಯಗಳ ಬಗ್ಗೆ ಪ್ರಚಾರ ಮಾಡುವುದರಲ್ಲಿ ಹಿಂದೆ ಬಿದ್ದಿರುವುದೇ ನಮಗೆ ತೊಂದರೆಯಾಗಿದ್ದು ಮುಂದೆ ನಡೆಯುವಂಥಹ ಲೋಕಸಭಾ ಚುನಾವಣೆಯಲ್ಲಿ ಸೇವಾಯೋಗಿಗಳ ಮುಖಾಂತರ ಪ್ರತೀ ಮನೆಯಲ್ಲಿ ಪ್ರಚಾರ ಪಡಿಸುವ ಮೂಲಕ ಕಾಂಗ್ರೆಸ್‍ನ ಬಲವರ್ಧನೆ ಮಾಡಬೇಕಾಗಿದೆ ಎಂದರು.

ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ, ದೇಶದಲ್ಲಿ ಬಿಜೆಪಿ ಕೇಂದ್ರ ಸರಕಾರದ ದುರಾಡಳಿತವನ್ನು ಕೊನೆಗಾಣಿಸಿ ಸುಭದ್ರ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು. ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಪ್ರಸ್ತಾವಿಕವಾಗಿ ಮಾಡಿದರು.
ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿಜಯ ಕುಮಾರ್ ರೈ, ಕೆಪಿಸಿಸಿ ಸದಸ್ಯರಾದ ಡಾ.ರಘು, ಕೆ.ಪಿ.ತೋಮಸ್, ಸಿಂಡಿಕೆಟ್ ಸದಸ್ಯರಾದ ವಿಜಯ ಕುಮಾರ್ ಸೊರಕೆ, ಪ್ರಚಾರ ಸಮಿತಿ ಅಧ್ಯಕ್ಷ ರಾಯ್ ಅಬ್ರಾಹಂ, ಕಡಬ ವಲಯ ಪ್ರಚಾರ ಸಮಿತಿ ವಲಯಾಧ್ಯಕ್ಷ ಸತೀಶ್ ನಾೈಕ್ ಮೇಲಿನ ಮನೆ, ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರ.ಕಾರ್ಯದರ್ಶಿ ಸುಧೀರ್ ದೇವಾಡಿಗ, ತಾ.ಪಂ.ಸದಸ್ಯರಾದ ಉಷಾ ಅಂಚನ್, ಫಝಲ್ ಕೋಡಿಂಬಾಳ, ಗಣೇಶ್ ಕೈಕುರೆ, ಆಶಾ ಲಕ್ಷ್ಮಣ್ ಗುಂಡ್ಯ, ಡಿಸಿಸಿ ಕಾರ್ಯದರ್ಶಿ ಎಚ್‍ಕೆ ಇಲ್ಯಾಸ್, ಸಿ.ಜೆ.ಸೈಮಾನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಾಸೀರ್ ಹೊಸಮನೆ, ಹಿಂದುಳಿದ ವರ್ಗದ ಅಧ್ಯಕ್ಷ ವಿಶ್ವನಾಥ, ಎಸ್‍ಸಿಎಸ್‍ಟಿ ಘಟಕದ ಅಧ್ಯಕ್ಷ ಶಶಿಧರ ಬೊಟ್ಟಡ್ಕ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಿವಣ್ಣ ಇಡ್ಯಾಡಿ, ಮನಮೋಹನ ಗೋಳ್ಯಾಡಿ, ಕೆ.ಜೆ.ತೋಮಸ್, ಪ್ರಮುಖರಾದ ಬಾಲಕೃಷ್ಣ ಬಳ್ಳೇರಿ, ಪ್ರವೀಣ್ ಕುಮಾರ್ ಕೆಡೆಂಜಿ, ಸುಧರ್ಶನ್ ನಾೈಕ್, ಆಲಂಕಾರು ವಲಯಾಧ್ಯಕ್ಷ ಯತೀಶ್ ಬಾನಡ್ಕ, ಬಿಳಿನೆಲೆ ವಲಯಾಧ್ಯಕ್ಷ ರಾಮಕೃಷ್ಣ ಹೊಳ್ಳಾರು, ಡಿಸಿಸಿ ಸದಸ್ಯರಾದ ಎಸ್.ಶರೀಫ್, ನೀಲಾವತಿ ಶಿವರಾಮ್, ಎಚ್.ಆದಂ, ಕ್ಸೇವಿಯರ್ ಬೇಬಿ, ವೆಂಕಟರಮಣ ಗೌಡ, ಗ್ರಾ.ಪಂ.ಅಧ್ಯಕ್ಷರಾದ ಬಾಬು ಮುಗೇರ, ಸದಾನಂದ ಗೌಡ, ಗಂಗಾಧರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿಗಳಾದ ಡೆನ್ನಿಸ್ ಫೆನಾಂಡಿಸ್, ತೋಮಸ್ ಇಡೆಯಾಳ, ಶಾಲಿನಿ ಸತೀಶ್ ನಾೈಕ್, ಜ್ಯೋತಿ ಡಿ ಕೋಲ್ಪೆ, ಎಂ.ಕೆ.ಪೌಲೋಸ್, ಗಣೇಶ್ ಪುತ್ತಿಗೆ ಸೇರಿದಂತೆ ಕಾಂಗ್ರೆಸ್ ಬ್ಲಾಕ್, ವಲಯ, ಗ್ರಾಮ, ಬೂತ್ ಮಟ್ಟದಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಸ್ವಾಗತಿಸಿ, ವಂದಿಸಿದರು. ಕಡಬ ವಲಯಾಧ್ಯಕ್ಷ ಅಶ್ರಫ್ ಶೇಡಿಗುಂಡಿ ಕಾರ್ಯಕ್ರಮ ನಿರೂಪಿಸಿದರು.

Also Read  ಮಕ್ಕಳನ್ನು ಬೈಕಿನಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಕಾಡಾನೆ ದಾಳಿ

error: Content is protected !!
Scroll to Top