ಕಕ್ಕಿಂಜೆಯ ಎಟಿಎಂ ದರೋಡೆಗೆ ವಿಫಲ ಯತ್ನ ► ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಅ.10. ಠಾಣಾ ವ್ಯಾಪ್ತಿಯ ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಪೇಟೆಯಲ್ಲಿನ ಸಿಂಡಿಕೇಟ್ ಬ್ಯಾಂಕ್ ಎಟಿಎಂ ದರೋಡೆ ಮಾಡಲು ಪ್ರಯತ್ನಿಸಿದ ಆರೋಪಿಯನ್ನು ಸಿಸಿಟಿವಿ ಫೂಟೇಜ್ ಆಧಾರದ ಮೇಲೆ ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಳ್ತಂಗಡಿ ಗ್ರಾಮದ ಉಜಿರೆಗ್ರಾಮದ ಕಕ್ಕೆಜಾಡು‌ ನಿವಾಸಿ ಮೊಯಿದ್ದೀನ್ ಎಂಬವರ ಪುತ್ರ ಮಹಮ್ಮದ್ ಆಸೀಫ್(25) ಎಂದು ಗುರುತಿಸಲಾಗಿದೆ. ಆರೋಪಿಯು ಎಟಿಎಂನ್ನು ದರೋಡೆಗೈಯಲು ವಿಫಲ ಯತ್ನ ನಡೆಸಿದ್ದನಲ್ಲದೆ ಚಾರ್ಮಾಡಿ ಮಸೀದಿಯಲ್ಲಿನ ಕಾಣಿಕೆ ಹುಂಡಿಯನ್ನು ಒಡೆದು 2000 ನಗದನ್ನು ದೋಚಿದ್ದನು. ಈ ಬಗ್ಗೆ ವಿಚಾರಣೆ ನಡೆಸಿದ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ನೀಡಿದೆ.

Also Read  ಕಬಕ: ಕಾರು ಬೈಕ್ ಗಳಿಗೆ ಸರಣಿ ಢಿಕ್ಕಿ ► ನಾಲ್ವರಿಗೆ ಗಾಯ

error: Content is protected !!
Scroll to Top