(ನ್ಯೂಸ್ ಕಡಬ) newskadaba.com ಸುಳ್ಯ, ಅ.06. ಶಾಲೆಗೆಂದು ತೆರಳಿದ ವಿದ್ಯಾರ್ಥಿಯೋರ್ವ ಶಾಲೆಗೂ ತೆರಳದೆ ಮನೆಗೂ ಬಾರದೆ ನಾಪತ್ತೆಯಾಗಿರುವ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಎಂಬಲ್ಲಿ ಅಕ್ಟೋಬರ್ 01 ರಂದು ನಡೆದಿದ್ದು, ತಡವಾಗಿ ಪ್ರಕರಣ ದಾಖಲಾಗಿದೆ.
ಆಲೆಟ್ಟಿ ಗ್ರಾಮದ ಅಡಿಂಜ ನಿವಾಸಿ ಸೀತಾರಾಮ ಎಂಬವರ ಪುತ್ರ ಮೋಕ್ಷಿತ್(15) ಬೆಳ್ಳಾರೆಯ ಖಾಸಗಿ ವಿದ್ಯಾ ಸಂಸ್ಥೆಯೊಂದರಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಅಕ್ಟೋಬರ್ 01 ರಂದು ಶಾಲೆಗೆ ಹೋಗುವುದಾಗಿ ಜೀಪಿನಲ್ಲಿ ತೆರಳಿದ್ದು, ಶಾಲೆಗೂ ಹೋಗದೇ ವಾಪಸ್ಸು ಮನೆಗೂ ಬಾರದೇ ಕಾಣೆಯಾಗಿದ್ದಾನೆ. ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿ ಪತ್ತೆಯಾಗದ ಕಾರಣ ಆತನ ತಾಯಿ ಗಿರಿಜಾ ನೀಡಿದ ದೂರಿನಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ಪ್ರಕರಣ ದಾಖಲಾಗಿದೆ.