ಕಡಬ: ಮುಖ್ಯ ಪೇಟೆಯಲ್ಲೇ ಸಾರ್ವಜನಿಕವಾಗಿ ಇಸ್ಪೀಟು ಆಡುತ್ತಿದ್ದಾಗ ಪೊಲೀಸ್ ದಾಳಿ ► ನಾಲ್ವರ ಬಂಧನ, ಓರ್ವ ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಅ.05. ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಆಡುತ್ತಿರುವಾಗ ದಾಳಿ‌ ನಡೆಸಿದ ಕಡಬ ಪೊಲೀಸರು ನಾಲ್ವರನ್ನು ಬಂಧಿಸಿದ್ದು, 4220 ರೂ.ಗಳನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ರಾತ್ರಿ ಕಡಬದಲ್ಲಿ ನಡೆದಿದೆ.

 

ಕಡಬ ಠಾಣಾ ವ್ಯಾಪ್ತಿಯ ಹಳೆಯ ನಿರೀಕ್ಷಣಾ ಮಂದಿರದ ಮುಂಭಾಗದ ಸಾರ್ವಜನಿಕ ಸ್ಧಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಆಟವನ್ನು ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಬಂಟ್ರ ಗ್ರಾಮದ ಶಿವಣ್ಣ ಗೌಡ ಎಂಬವರ ಪುತ್ರ ಹರೀಶ್(41), ಕುಟ್ರುಪಾಡಿ ಗ್ರಾಮದ ಅಮೈ ನಿವಾಸಿ ಶಿವಪ್ಪ ಪೂಜಾರಿ ಎಂಬವರ ಪುತ್ರ ನವೀನ್ ಕುಮಾರ್(25) ಹಳೇ ಸ್ಟೇಶನ್ ನಿವಾಸಿ ಅಂಗಾರ ಎಂಬವರ ಪುತ್ರ ರಮೇಶ್(32) ಕೋಡಿಂಬಾಳ ಗ್ರಾಮದ ಬೆದ್ರಾಜೆ ನಿವಾಸಿ ಐತಪ್ಪ ಎಂಬವರ ಪುತ್ರ ಕೃಷ್ಣ(54) ಎಂಬವರನ್ನು ಬಂಧಿಸಿದ್ದು, ಆಟಕ್ಕೆ ಬಳಸಿದ 4220 ರೂ. ಹಣ ಹಾಗೂ ಕ್ಯಾಂಡಲ್, ಇಸ್ಪೀಟು ಎಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದಂ ಎಂಬಾತ ಪರಾರಿಯಾಗಿದ್ದಾನೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಂಟ್ವಾಳ ಪಜೀರು ➤ಸೆ.26 ರಂದು ಗ್ರಾ.ಪಂ ಜಮಾಬಂದಿ

error: Content is protected !!
Scroll to Top