ಕಡಬ: ನಾಪತ್ತೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಅ.05. ನಾಪತ್ತೆಯಾಗಿದ್ದ ಯುವತಿಯನ್ನು ಪತ್ತೆ ಹಚ್ಚಿರುವ ಪೊಲೀಸರು ಆಕೆಯನ್ನು ಪೋಷಕರ ಅನುಮತಿ ಮೇರೆಗೆ ತನ್ನ ಪ್ರಿಯಕರನೊಂದಿಗೆ ಕಳುಹಿಸಿಕೊಟ್ಟ ಘಟನೆ ಶುಕ್ರವಾರದಂದು ಕಡಬ ಠಾಣೆಯಲ್ಲಿ ನಡೆದಿದೆ.

ಕಡಬ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆ ನಿವಾಸಿ ಕುಂಞ ಎಂಬವರ ಪುತ್ರಿ ಶ್ವೇತಾ(20) ಎಂಬಾಕೆ ಕಾಣೆಯಾಗಿದ್ದ ಬಗ್ಗೆ ಇತ್ತೀಚೆಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿದ ಕಡಬ ಪೊಲೀಸರು ಕಾಣೆಯಾದ ಹುಡುಗಿ ತನ್ನ ಪ್ರಿಯಕರ ಪುರಂದರ ಎಂಬಾತನ ಜೊತೆ ರೆಂಜಿಲಾಡಿ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಪತ್ತೆ ಹಚ್ಚಿದ್ದು, ಠಾಣೆಗೆ ಕರೆಯಿಸಿ ಪೋಷಕರ ಸಮಕ್ಷಮ ವಿಚಾರಿಸಿದಾಗ ಪ್ರಿಯಕರನೊಂದಿಗೆ ಹೋಗುವುದಾಗಿ ತಿಳಿಸಿದಂತೆ ಪೋಷಕರ ಒಪ್ಪಿಗೆಯಲ್ಲಿ ಪುರಂದರನ ಜೊತೆಗೆ ಕಳುಹಿಸಿ ಕೊಟ್ಟಿದ್ದಾರೆ.

Also Read  ಏನೆಕಲ್ಲು : ಬೋರವೆಲ್ ನಲ್ಲಿ ನೀರು ಬಾರದಿದದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

error: Content is protected !!
Scroll to Top