ಕಡಬದ ವ್ಯಕ್ತಿ ಹಾಸನದ ಅರಕಲಗೂಡಿನಲ್ಲಿ ನಿಗೂಢ ಮೃತ್ಯು

(ನ್ಯೂಸ್ ಕಡಬ) newskadaba.com ಹಾಸನ, ಅ.03. ಕಡಬದ ವ್ಯಕ್ತಿಯೋರ್ವರು ಹಾಸನದ ಅರಕಲಗೂಡಿನಲ್ಲಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ಬುಧವಾರ ಬೆಳಿಗ್ಗೆ ಕಂಡುಬಂದಿದೆ.

ಮೃತ ವ್ಯಕ್ತಿಯನ್ನು ಕಡಬ ತಾಲೂಕು ಬಂಟ್ರ ಗ್ರಾಮದ ಹಳೇಸ್ಟೇಷನ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಅಬ್ದುಲ್ ಅಝೀಝ್ ಎಂದು ಗುರುತಿಸಲಾಗಿದೆ. ಮೃತರು ಕಳೆದೊಂದು ವಾರದಿಂದ ಅರಕಲಗೂಡು ಪರಿಸರದಲ್ಲಿ ಇದ್ದರೆನ್ನುವ ಮಾಹಿತಿಯಿದ್ದು, ಮಂಗಳವಾರ ರಾತ್ರಿ ಇವರನ್ನು ಕಂಡವರಿದ್ದಾರೆ‌. ಆದರೆ ಬುಧವಾರ ಬೆಳಿಗ್ಗೆ ಬಸ್ ನಿಲ್ದಾಣದ ಬಳಿ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Also Read  ಮರ್ಧಾಳ: ಇಂದು ಸೌಜನ್ಯಾಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ

error: Content is protected !!