ಕೊಯಿಲ: ಕಾಲೇಜು ವಿದ್ಯಾರ್ಥಿನಿಯ ಜುಟ್ಟು ಹಿಡಿದು ಜೀವ ಬೆದರಿಕೆ ► ಐವರ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಸೆ.30. ವಿದ್ಯಾರ್ಥಿನಿಯೋರ್ವಳು ಕಾಲೇಜು ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಠಾಣಾ ವ್ಯಾಪ್ತಿಯ ಕೊಯಿಲ ಎಂಬಲ್ಲಿ ಐವರು ಬಂದು ತನ್ನನ್ನು ಅಪಹರಣಕ್ಕೆ ಯತ್ನಿಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ‌ ಎಂದು ಬಾಲಕಿಯೋರ್ವಳು ಕಡಬ ಠಾಣೆಗೆ ದೂರು ನೀಡಿದ್ದಾಳೆ.

ಗುರುವಾರದಂದು ಕಾಲೇಜು ಬಿಟ್ಟು ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೊಲೆರೋ ಕಾರಿನಲ್ಲಿ ಆಗಮಿಸಿದ ಪರಿಚಯಸ್ಥರಾದ ಮಹಮ್ಮದ್ ಕೋಲ್ಪೆ, ಅಶ್ರಫ್ ಸಾಲ್ಮರ, ಆದಂ ಕೊಯಿಲ ಹಾಗೂ ಇತರ ಇಬ್ಬರು ತನ್ನ ಕೈ ಹಿಡಿದು, ಜುಟ್ಟನ್ನು ಎಳೆದು ಅಪಹರಣಕ್ಕೆ ಯತ್ನಿಸಿದ್ದಲ್ಲದೆ, ತನ್ನ ತಂದೆಯನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಬಾಲಕಿಯು ಕಡಬ ಠಾಣೆಗೆ ದೂರು ನೀಡಿದ್ದಾಳೆ. ಬಾಲಕಿಯ ದೂರಿನಂತೆ ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Also Read  ಇಂದು ಕಡಬದಲ್ಲಿ ಬೈಕ್, ಕಾರುಗಳ ಎಕ್ಸ್‌ಚೇಂಜ್ ಹಾಗೂ ಮಾರಾಟ ಮೇಳ ➤ ಶ್ರೀ ಸರಸ್ವತೀ ಸೊಸೈಟಿಯ ವತಿಯಿಂದ ಸ್ಥಳದಲ್ಲೇ ಸಾಲ ಮೇಳ

error: Content is protected !!
Scroll to Top