ಕೊಂಬಾರು: ದ್ವಿತೀಯ ಪಿಯು ವಿದ್ಯಾರ್ಥಿನಿ ಜಾಂಡೀಸ್ ಗೆ ತುತ್ತಾಗಿ ಮೃತ್ಯು ► ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ 2017 ಎಸ್ಸೆಸ್ಸೆಲ್ಸಿ ಟಾಪರ್ ಹರ್ಷಾ..!!

(ನ್ಯೂಸ್ ಕಡಬ) newskadaba.com ಕಡಬ, ಸೆ.30. ಜ್ವರ ಹಾಗೂ ಹಳದಿ ಕಾಯಿಲೆಗೆ ತುತ್ತಾಗಿ ಪ್ರಥಮ ಪಿಯು ವಿದ್ಯಾರ್ಥಿನಿಯೋರ್ವಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಭಾನುವಾರದಂದು ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಕೊಂಬಾರು ಶಾಲಾ ಮುಖ್ಯೋಪಾಧ್ಯಾಯರಾದ ಕೊಂಬಾರು ಹೊಸಬೀಡು ನಿವಾಸಿ ಚಿದಾನಂದ ಗೌಡ ಎಂಬವರ ಪುತ್ರಿ ಹರ್ಷಾ ಕೆ.ಸಿ.(17) ಎಂದು ಗುರುತಿಸಲಾಗಿದೆ. 2017 ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 609 ಅಂಕಗಳನ್ನು ಪಡೆಯುವ ಮೂಲಕ ಕಡಬದ ಕ್ನಾನಾಯ ಜ್ಯೋತಿ ವಿದ್ಯಾಸಂಸ್ಥೆಯ ಟಾಪರ್ ಆಗಿದ್ದ ಈಕೆ, ಬಳಿಕ ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಜ್ವರ ಹಾಗೂ ಜಾಂಡಿಸ್ ಖಾಯಿಲೆಗೆ ತುತ್ತಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಭಾನುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Also Read  ಸುಬ್ರಹ್ಮಣ್ಯ: ನೇಣು ಬಿಗಿದು ಯುವಕ ಆತ್ಮಹತ್ಯೆ

error: Content is protected !!
Scroll to Top