ಮಂಗಳೂರು: ನಗರದ ಬಟ್ಟೆ ಮಳಿಗೆಯಲ್ಲಿ ಬೆಂಕಿ ► ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.27. ಬಟ್ಟೆ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿಯುಂಟಾಗಿ ಹೊತ್ತಿ ಉರಿದ ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ಮಂಗಳೂರಲ್ಲಿ ಗುರುವಾರದಂದು ನಡೆದಿದೆ.

ನಗರದ ಜಿಎಚ್ಎಸ್ ರಸ್ತೆಯ ಜನತಾ ಬಝಾರ್ ಬಳಿಯಲ್ಲಿನ ‘ಸೆಲೆಕ್ಷನ್ ಸೆಂಟರ್’ ಬಟ್ಟೆ ಮಳಿಗೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಪರಿಸರವಿಡೀ ಹಬ್ಬಿದೆ. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದ ಶಂಕಿಸಲಾಗಿದ್ದು, ಘಟನೆಯಿಂದಾಗಿ ಅಪಾರ ನಷ್ಟವುಂಟಾಗಿದೆ.

Also Read  ಗಂಗೆಯಲ್ಲಿ ತೇಲಿ ಬಂದ ಪೆಟ್ಟಿಗೆಯಲ್ಲಿತ್ತು 21 ದಿನದ ಕಂದಮ್ಮ..?!

error: Content is protected !!
Scroll to Top