(ನ್ಯೂಸ್ ಕಡಬ) newskadaba.com ಕಡಬ, ಸೆ.27. ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀಣೋದ್ದಾರ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯು ದೇವಳದ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತಾಯ ಮಾತನಾಡಿ, ಶಿಕ್ಷಣ ಕೇಂದ್ರ, ದೇವಾಲಯದ ಅಭಿವೃದ್ದಿಯಾದಲ್ಲಿ ಆ ಊರಿನಲ್ಲಿ ಶಾಂತಿ ನೆಮ್ಮದಿ ಸುಖ ನೆಲೆಸುತ್ತದೆ. ದೇವಸ್ಥಾನದ ಜೀಣೋದ್ದಾರ ಪಾಲ್ಗೊಂಡಲ್ಲಿ ನಮ್ಮ ಪಾಪ ಕರ್ಮಗಳಿಗೆ ಮುಕ್ತಿ ದೊರೆಯುತ್ತದೆ. ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ದಾರ ಕಾರ್ಯದಲ್ಲಿ ಭಕ್ತ ಸಮೂಹ ಸ್ವ್ವಚ್ಚೆಯಿಂದ ಪಾಲ್ಗೊಂಡು ಸುಂದರ ದೇವಾಲಯ ನಿರ್ಮಾಣ ಮಾಡಬೇಕು ಎಂದರು. ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ ಮಾತನಾಡಿ, ಅದ್ಯಾತ್ಮವನ್ನು ವಿಜ್ಞಾನವೂ ಒಪ್ಪಿಕೊಂಡಿದೆ. ಆದರೆ ಬುದ್ದಿಜೀವಿಗಳು ಅದ್ಯಾತ್ಮವನ್ನು ವಿರೋದಿಸುವುದು ಖೇದಕರ. ಪ್ರಪಂಚದ ಅನೇಕ ದೇವಾಲಯದ ವಿನ್ಯಾಸಗಳ ಅದರ ಸ್ಥಾಪನೆಯ ಬಗ್ಗೆ ವಿಜ್ಞಾನಿಗಳಿಗೆ ಇನ್ನೂ ನಿಖರ ಮಾಹಿತಿ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇದೆಲ್ಲ ದೇವರ ಇರುವಿಕೆಯನ್ನು ತೋರ್ಪಡಿಸುತ್ತದೆ. ದೇವರ ವಿರುದ್ದವಾಗಿ ನಡೆದಲ್ಲಿ ಅಂತ್ಯ ಖಂಡಿತ ಎನ್ನುವುದಕ್ಕೆ ಪ್ರಸ್ತುತ ನಡೆಯುತ್ತಿರುವ ವಿಕೋಪಗಳು ನಿದರ್ಶನ. ದೇವಾಲಯದ ಜೀರ್ಣೋದ್ದಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀಣೋದ್ದಾರ ಕಾರ್ಯಕ್ಕೆ ಸುಮಾರು 7 ಕೋಟಿ ವೆಚ್ಚ ತಗಲಲಿದೆ ಎಂದರು.
ಸನತ್ ಕುಮಾರ್ ಬಳ್ಳಲ್ ಅಧ್ಯಕ್ಷತೆ ವಹಿಸಿದ್ದರು. ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಳದ ಜೀಣೋದ್ದಾರ ಸಮಿತಿ ಅದ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅದ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ರೆಂಜಿಲಾಡಿ ಬೀಡಿನ ಯಶೋದರ ಯಾನೆ ತಮ್ಮಯ್ಯ ಬಳ್ಳಲಾ , ಎಡಮಂಗಲ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅದ್ಯಕ್ಷ ಚಂದ್ರಶೇಖರ ಎಡಮಂಗಲ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ನಿವೃತ್ತ ಶಿಷ್ಠಚಾರ ಅಧಿಕಾರಿ ವೆಂಕಟರಾಜ್, ಕುಲ್ಕುಂದ ಬಸವನಮೂಲೆ ದೇವಸ್ಥಾನದ ಜೀಣೋದ್ದಾರ ಸಮಿತಿ ಅದ್ಯಕ್ಷ ಮನೋಹರ್ ನಾಳ ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಜೀಣೋದ್ದಾರ ಸಮಿತಿ ಅದ್ಯಕ್ಷ ಶಿವಪ್ರಸಾದ್ ಕೈಕುರೆ ಸ್ವಾಗತಿಸಿದರು. ತಮ್ಮಯ್ಯ ಗೌಡ ವಂದಿಸಿದರು. ಸೀತರಾಮ ಪೊಸವಳಿಕೆ ನಿರೂಪಿಸಿದರು.