ಬಂಟ್ವಾಳ: ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ► ಸ್ವತ್ತುಗಳೊಂದಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಆರೋಪಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.27. ಸರಕಾರದಿಂದ ಪಡಿತರ ಕಾರ್ಡ್ ದಾರರಿಗೆ ವಿತರಣೆ ಆಗುವ ಅಕ್ಕಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ಪತ್ತೆ ಹಚ್ಚಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ‘ಬಿ’ ಮೂಡ ಗ್ರಾಮದ ಪರ್ಲಿಯಾ ನಿವಾಸಿ ಅಬ್ದುಲ್ ರಜಾಕ್ ಎಂಬವರ ಪುತ್ರ ನಿಯಾಜ್ ಹಸನ್ (36) ಎಂದು ಗುರುತಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣಾ ಸಬ್ ಇನ್ಸ್ ಪೆಕ್ಟರ್ ಪ್ರಸನ್ನ ಎಂ,ಎಸ್ ಮತ್ತು ಸಿಬಂದಿಯವರು ರಾಮಲ್ ಕಟ್ಟೆ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ತುಂಬೆ ಕಡೆಯಿಂದ ಬಂದ ಪಿಕ್ ಅಪ್ ನ್ನು ನಿಲ್ಲಿಸಿ ತಪಾಸಣೆ ನಡೆಸಲಾಗಿ ಅದರಲ್ಲಿ ಸುಮಾರು 50 ಕಿಲೋ ತೂಕದ 40 ಪ್ಯಾಕೆಟ್ ಅನ್ನ ಭಾಗ್ಯದ ಅಕ್ಕಿ, 50 ಖಾಲಿ ಪ್ಲಾಸ್ಟಿಕ್ ಗೋಣಿ ಚೀಲಗಳು, ಪ್ಲಾಸ್ಟಿಕ್ ಗೋಣಿಗೆ ಹೊಲಿಗೆ ಹಾಕುವ ಸ್ಟಿಚ್ಚಿಂಗ್ ಮಿಷನ್ ನ್ನು ಪತ್ತೆ ಹಚ್ಚಿದ್ದಾರೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. 1,82,200/- ಎಂದು ಅಂದಾಜಿಸಲಾಗಿದೆ. ಬಂಟ್ವಾಳ ತಾಲೂಕು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!

Join the Group

Join WhatsApp Group