ಟಿವಿ ವರದಿಗಾರರ ಹೆಸರಲ್ಲಿ ಮರಳು ಸಾಗಾಟಗಾರರನ್ನು ಬೆದರಿಸಿ ಹಣ ಸುಲಿಗೆ ► ನೆಲ್ಯಾಡಿ ಮೂಲದ ನಕಲಿ ಪತ್ರಕರ್ತ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.26. ಟಿವಿ ಮಾಧ್ಯಮ ವರದಿಗಾರರ ಹೆಸರಲ್ಲಿ ಸುಲಿಗೆ ನಡೆಸುತ್ತಿದ್ದ ನಕಲಿ ಪತ್ರಕರ್ತನೋರ್ವನನ್ನು ಪೊಲೀಸರ ವಶಕ್ಕೊಪ್ಪಿಸಿದ ಘಟನೆ ಬುಧವಾರದಂದು ಬೆಳ್ತಂಗಡಿಯಲ್ಲಿ ನಡೆದಿದೆ.

ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ಮರಳು ಇರುವ ಪ್ರದೇಶಕ್ಕೆ ತೆರಳಿ ಬಿಟಿವಿ ನ್ಯೂಸ್ ಚಾನಲ್ ಹೆಸರಿನಲ್ಲಿ ಮರಳು ಸಾಗಾಟಗಾರರನ್ನು ಬೆದರಿಸಿ 15 ಸಾವಿರ, 7 ಸಾವಿರ ಹಾಗೂ 30 ಸಾವಿರ ಹಣ ಸುಲಿಗೆ ಮಾಡಿದ್ದ ನಕಲಿ ಪತ್ರಕರ್ತ ಕೊಕ್ಕಡ ಗ್ರಾಮದ ಪಟ್ರಮೆ ನಿವಾಸಿ ಸತೀಶ್ ಬುಧವಾರ ಸಂಜೆ ರೆಡ್ ಹ್ಯಾಂಡ್ ಅಗಿ ಸಿಕ್ಕಿಬಿದ್ದಿದ್ದು, ಈತನನ್ನು ಧರ್ಮಸ್ಥಳ ಪೊಲೀಸ್ ವಶಕ್ಕೊಪ್ಪಿಸಲಾಗಿದೆ. ಸೂಕ್ತ ರೀತಿಯಲ್ಲಿ ತನಿಖೆಯಾದಲ್ಲಿ ಇನ್ನೂ ಹೆಚ್ಚಿನ ಸುಲಿಗೆ ಪ್ರಕರಣ ಬಯಲಿಗೆ ಬರಲಿದೆ.

Also Read  ವಿಧಾನಸಭಾ ಚುನಾವಣೆ ಹಿನ್ನೆಲೆ ➤ಮೇ.10ರಂದು ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ..!

error: Content is protected !!
Scroll to Top