ಕಡಬ ಪೊಲೀಸ್ ಠಾಣಾ ವಾಹನದ ಮಾಜಿ ಚಾಲಕ ಕುರಿಯಕೋಸ್ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಸೆ.25. ನಿವೃತ್ತ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಮರ್ಧಾಳ ಇಳಾರ ನಿವಾಸಿ ಇ.ಸಿ. ಕುರಿಯಕೋಸ್(65) ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರದಂದು ನಿಧನರಾದರು.

ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ಆರಂಭಿಸಿದ್ದ ಇವರು ಬಳಿಕ ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ, ಕಡಬ ಠಾಣೆಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಬುಧವಾರ ಅಪರಾಹ್ನ 2 ಗಂಟೆಗೆ ಮರ್ಧಾಳ ಸೈಂಟ್ ಮೇರೀಸ್ ಚರ್ಚಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಮೃತರ ಕುಟುಂಬ ಮೂಲಗಳು ತಿಳಿಸಿವೆ.

Also Read  ಮೊಟ್ಟೆ ಒಡೆದು, ನಿಂಬೆಹಣ್ಣು ಕುಯ್ದು ► ಸರ್ಕಾರಿ ಆಸ್ಪತ್ರೆಯಲ್ಲೇ ವಾಮಾಚಾರ

error: Content is protected !!
Scroll to Top