ಮರ್ಧಾಳ: ಗುಡ್ ಶೆಫರ್ಡ್ ಶಾಲೆಯ ಶಿಕ್ಷಣದ ಗುಣಮಟ್ಟ ಕುಸಿತದ ಹಿನ್ನೆಲೆ ► ಶಾಲಾ ಮ್ಯಾನೇಜರ್ ಬದಲಾಯಿಸುವಂತೆ ಆಗ್ರಹಿಸಿ ಶಾಲೆಗೆ ಜಮಾಯಿಸಿದ ಪೋಷಕರು

(ನ್ಯೂಸ್ ಕಡಬ) newskadaba.com ಕಡಬ, ಸೆ.25. ಐತ್ತೂರು ಗ್ರಾಮದಲ್ಲಿರುವ ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ, ಈ ಹಿನ್ನಲೆಯಲ್ಲಿ ವಿದ್ಯಾಥಿಗಳು ಈ ಶಾಲೆಯಿಂದ ಬೇರೆ ಶಾಲೆಗಳಿಗೆ ಸೇರುತ್ತಿದ್ದಾರೆ, ಹೀಗೆ ಮುಂದುವರಿದರೆ ಎಲ್ಲಾ ವಿದ್ಯಾರ್ಥಿಗಳು ಬೇರೆ ಶಾಲೆಗೆ ಹೋಗಲಿದ್ದು ಕೂಡಲೇ ಶಾಲಾ ಮುಖ್ಯಸ್ಥರು ಕ್ರಮ ಕೈಗೊಳ್ಳುವಂತೆ ಮಕ್ಕಳ ಪೋಷಕರು ಆಗ್ರಹಿಸಿದ ಘಟನೆ ಸೆ.24ರಂದು ನಡೆದಿದೆ.

ಹಲವಾರು ವರ್ಷಗಳಿಂದ ದೇಶದ ನಾನಾ ಭಾಗದಲ್ಲಿ ಗುಡ್‍ಶೆಫರ್ಡ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಆಂಗ್ಲ ಮಾಧ್ಯಮ ಶಾಲೆಯು ಉತ್ತಮ ಶಿಕ್ಷಣ ನೀಡಿ, ಒಳ್ಳೆ ಹೆಸರನ್ನು ಗಳಿಸಿತ್ತು, ಆದರೆ ಕಳೆದ ವರ್ಷದಿಂದ ಶಾಲಾ ಫಲಿತಾಂಶದಲ್ಲಿ ಹಿನ್ನಡೆ ಕಂಡು ಬಂದಿದ್ದು ಈ ಹಿನ್ನಲೆಯಲ್ಲಿ ಈಗಾಗಲೇ ಸುಮಾರು 60ರಷ್ಟು ವಿದ್ಯಾರ್ಥಿಗಳು ಈ ಶಾಲೆಯನ್ನು ಬಿಟ್ಟು ಬೇರೆ ಶಾಲೆಗಳಿಗೆ ಸೇರುತ್ತಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಆಗಮಿಸಿದ್ದ ರಾಜ್ಯ ವ್ಯವಸ್ಥಾಪಕ ಶಾಲಾ ಉಸ್ತುವಾರಿಯವರಲ್ಲಿ ಸಮಸ್ಯೆಗಳನ್ನು ವಿದ್ಯಾರ್ಥಿಗಳ ಪೋಷಕರು ಬಿಚ್ಚಿಟ್ಟಿದ್ದಾರೆ. ಸೆ.24ರಂದು ಗುಡ್ ಶೆಫರ್ಡ್ ವಿದ್ಯಾಸಂಸ್ತೆಗಳ ಕರ್ನಾಟಕ ರಾಜ್ಯ ವ್ಯವಸ್ಥಾಪಕ ಜೆ. ಆಂಡ್ರೀಸ್, ಸಹಾಯಕ ವ್ಯವಸ್ಥಾಪಕ ಪ್ರಕಾಶ್‍ರವರುಗಳು ಆಗಮಿಸಿದ್ದು ಈ ವಿಚಾರ ತಿಳಿದ ಪೋಷಕರು ಶಾಲೆಗೆ ತೆರಳಿದ್ದರು. ಬಳಿಕ ಪೋಷಕರ ಸಭೆ ನಡೆಸಲಾಗಿದ್ದು ಈ ಸಭೆಯಲ್ಲಿ ಪೋಷಕರು ಹಲವು ಸಮಸ್ಯೆಗಳ ಬಗ್ಗೆ ರಾಜ್ಯ ವ್ಯವಸ್ಥಾಪಕರಿಗೆ ದೂರು ನೀಡಿ, ಈ ಶಾಲೆಯಲ್ಲಿ ಈ ಹಿಂದೆ ಉತ್ತಮ ಶಿಕ್ಷಣ ದೊರೆಯುತ್ತಿತ್ತು ಅದರಿಂದ ಉತ್ತಮ ಫಲಿತಾಂಶವು ಬರುತ್ತಿತ್ತು, ಆದರೆ ಕಳೆದ ವರ್ಷದಿಂದ ಶಿಕ್ಷಣದ ಗುಣಮಟ್ಟವು ಕುಸಿದಿದ್ದು ಫಲಿತಾಂಶವು ಕಡಿಮೆ ಬರುತ್ತಿದೆ, ಅಲ್ಲದೆ ಶಾಲಾ ಮುಖ್ಯ ಶಿಕ್ಷಕರ ಹುದ್ದೆ ಮತ್ತು ಶಾರೀರಿಕ ಶಿಕ್ಷಕರ ಹುದ್ದೆ ಖಾಲಿ ಇದೆ, ಕಳೆದ ವರ್ಷ ಇದ್ದ ಶಾರೀರಿಕ ಶಿಕ್ಷಕರು ಹಾಗೂ ಇನ್ನೋರ್ವ ಉತ್ತಮ ಶಿಕ್ಷಕರು ಶಾಲೆಯಿಂದ ಬಿಟ್ಟಿದ್ದಾರೆ, ಇದಕ್ಕೆಲ್ಲ ಶಾಲಾ ಮ್ಯಾನೆಜ್‍ಮೆಂಟ್ ಸರಿ ಇಲ್ಲದಿರುವುದು ಕಾರಣವಾಗಿದೆ. ಕೂಡಲೇ ಶಾಲಾ ಮ್ಯಾನೆಜರ್ ಅವರನ್ನು ಬದಲಾಯಿಸಬೇಕು, ಶಾಲೆಗೆ ಮುಖ್ಯ ಶಿಕ್ಷಕರನ್ನು ನೇಮಕಗೊಳಿಸಬೇಕು, ಶಾರೀರಿಕ ಶಿಕ್ಷಕರನ್ನು ನೇಮಕಗೊಳಿಸಬೇಕು, ಮತ್ತು ಇದುವರೆಗೆ ಶಾಲೆಯಲ್ಲಿ ಪೋಷಕರ ಸಭೆಯನ್ನು ಕರೆದಿಲ್ಲ, ನಾವು ಯಾವುದೇ ಸಮಸ್ಯೆಯನ್ನು ಹೇಳಿಕೊಳ್ಳಬೇಕಿದ್ದರೆ ಪೋಷಕರ ಸಭೆಯಲ್ಲಿ ಮಾತ್ರ ಸಾಧ್ಯ ಅಂತಹ ಸಭೆಯನ್ನೆ ಕರೆಯುತ್ತಿಲ್ಲ ಎಂದು ಪೋಷಕರು ಆರೋಪ ವ್ಯಕ್ತಪಡಿಸಿ ಒಂದಾ ಸಮಸ್ಯೆಯನ್ನು ಸರಿಪಡಿಸಬೇಕು ಇಲ್ಲದಿದ್ದರೆ ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದು ಹೇಳಿದರು.

Also Read  ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಜು. 25ರ ವರೆಗೆ ಅವಧಿ ವಿಸ್ತರಣೆ

ಈ ಬಗ್ಗೆ ಉತ್ತರಿಸಿದ ರಾಜ್ಯ ವ್ಯವಸ್ಥಾಪಕರು, ಇಲ್ಲಿಯ ಸಮಸ್ಯೆಯ ಬಗ್ಗೆ ಈಗಾಗಲೇ ನಿಮ್ಮಿಂದ ತಿಳಿಯಿತು, ಆದರೆ ಯಾವುದೇ ಕಾರಣಕ್ಕೂ ಮಕ್ಕಳನ್ನು ಈ ಶಾಲೆಯಿಂದ ವರ್ಗಾಯಿಸಬೇಡಿ, ಸಮಸ್ಯೆಯನ್ನು ಬಗೆಹರಿಸುತ್ತೆನೆ ಎಂದು ಹೇಳಿದ ಅವರು ಮ್ಯಾನೆಜರ್ ಬದಲಾವಣೆ ಒಮ್ಮಿಂದ ಒಮ್ಮೆಲೆ ಸಾಧ್ಯವಿಲ್ಲ, ಈ ಶೈಕ್ಷಣಿಕ ಅವಧಿ ಮುಗಿದ ಕೂಡಲೆ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು, ಶಿಕ್ಷಕರ ಕೊರತೆಯನ್ನು ಬಗೆಹರಿಸುತ್ತೆವೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಪ್ರಯತ್ನ ಮಾಡುತ್ತೆವೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಬಳಿಕ ಶಾಲೆಯ ಶಿಕ್ಷಕರ ಮಾಹಿತಿಯನ್ನು ಪರಿಶೀಲಿಸಿ ಅದನ್ನು ಸಭೆಗೆ ಓದಿ ಹೇಳಲಾಯಿತು. ಅಲ್ಲದೆ ಸೆ.25ರಂದು ಬೆಳಿಗ್ಗೆ ಪೋಷಕರ ಸಭೆಯನ್ನು ಕರೆದಿದ್ದು ಎಲ್ಲರೂ ನಾಳೆ ಬರಬೇಕು ಆ ಸಭೆಯಲ್ಲಿ ಎಲ್ಲ ವಿಚಾರಗಳನ್ನು ಚರ್ಚಿಸುವ ಎಂದು ಹೇಳಿದರು. ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ರಾಜ್ಯ ವ್ಯವಸ್ಥಾಪಕರು, ಶಾಲಾ ಆಡಳಿತ ಮತ್ತು ಪೋಷಕರ ನಡುವೆ ಸಣ್ಣ ಗೊಂದಲಗಳು ಇದೆ, ಇದನ್ನು ಬಗೆಹರಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಂಟ್ರ ಕ್ಲಸ್ಟರ್ ಮುಖ್ಯಸ್ಥ ಪೊಡಿಯ, ಶಾಲಾ ವ್ಯವಸ್ಥಾಪಕಿ ಸಿಮಿ ಸನ್ನಿ ವರ್ಗೀಸ್ ಮೊದಲಾದವರು ಉಪಸ್ಥಿತರಿದ್ದರು. ಪ್ರಮುಖ ಪೋಷಕರಾದ ಸುಲೈಮಾನ್, ಮಹಮ್ಮದ್, ಸುಭಾಷ್, ಸುರೇಶ್, ದಿವೀಶ್, ಮೀನಾಕ್ಷಿ, ವನಿತಾ, ಯೋಗೀಶ್ ಮೊದಲಾದವರು ಉಪಸ್ಥಿತರಿದ್ದರು.

Also Read  ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ - ರಾಶಿ ಫಲ

error: Content is protected !!
Scroll to Top