ಕಡಬ: ಒಂಭತ್ತನೇ ತರಗತಿಯ ಬಾಲಕನನ್ನು ‘ಚಂದವಾಗಿದ್ದೀಯಾ.. ನನ್ನ ಜೊತೆ ಬಾ ಎಂದ ಅಸ್ಸಾಮಿ’ ► ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಸೆ.24. ಒಂಭತ್ತನೆಯ ತರಗತಿಯ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಘಟನೆ ಠಾಣಾ ವ್ಯಾಪ್ತಿಯ ಕೊಯಿಲದಲ್ಲಿ ನಡೆದಿದ್ದು, ಈ ಬಗ್ಗೆ ಫೋಕ್ಸೋ ಕಾಯ್ದೆಯಡಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 21 ರಂದು ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಒಂಭತ್ತನೆಯ ತರಗತಿಯ ವಿದ್ಯಾರ್ಯೋರ್ವ ಸ್ನೇಹಿತನ ಮನೆಗೆ ಹೋಗಿ ಆಟವಾಡಿ ವಾಪಾಸು ಬರುತ್ತಿರುವಾಗ ಬೈಕಿನಲ್ಲಿ ಬಂದ ಪರಿಚಯದ ಮುಸ್ತಾಫ ಎಂಬಾತ ನೀನು ಬಾರಿ ಚಂದವಾಗಿದ್ದು, ನನ್ನ ಜೊತೆಯಲ್ಲಿ ಬಾ ಎಂದು ಕರೆದಾಗ ತಾನು ಬೈಕಿನಲ್ಲಿ ಹೋಗಲು ನಿರಾಕರಿಸಿದ್ದು, ಆ ವೇಳೆ ಆರೋಪಿ ಮುಸ್ತಫಾ ಅವಾಚ್ಯ ಶಬ್ದಗಳಿಂದ ನಿಂದಿಸಿ ನೆಲಕ್ಕೆ ದೂಡಿ ಹಾಕಿದ್ದಲ್ಲದೆ ಕಾಲಿನಿಂದ ಎದೆಗೆ ಮತ್ತು ಸೊಂಟಕ್ಕೆ ತುಳಿದು ಕಲ್ಲಿನಿಂದ ಜಜ್ಜಿ ಗಾಯಗೊಳಿಸಿದ್ದಾನೆ ಎನ್ನಲಾಗಿದೆ. ಗಾಯಾಳು ಬಾಲಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಮುಸ್ತಫಾ ಕೆಲವು ಸಮಯದಿಂದ ಕಾಮ ದ್ರಷ್ಟಿಯಿಂದ ನೋಡುತ್ತಿದ್ದು ಬೈಕಿನಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಿರುವುದಾಗಿದೆ ಎಂದು ಬಾಲಕ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Also Read  ಮಂಗಳೂರು: ಮಗುವನ್ನು ಬದಲಾಯಿಸಿದ ಲೇಡಿಗೋಶನ್ ಆಸ್ಪತ್ರೆ ವೈದ್ಯರು ➤ DNA ಪರೀಕ್ಷೆಗೆ ಪೋಷಕರ ಒತ್ತಾಯ

error: Content is protected !!
Scroll to Top