(ನ್ಯೂಸ್ ಕಡಬ) newskadaba.com ಕಡಬ, ಜು.22. ಒಡಿಯೂರು ಶ್ರೀ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಒಡಿಯೂರು ಸಂಚಾಲಿತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕುಂಡಾ-ರಾಮಕುಂಜ ಘಟಕ ಸಮಿತಿ ವತಿಯಿಂದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ 57ನೇ ಜನ್ಮ ದಿನೋತ್ಸವ ಪ್ರಯುಕ್ತ ನಡೆಸಲಾದ ಗ್ರಾಮ ಸ್ವಚ್ಚತಾ ಸಪ್ತಾಹ ಸಮಾರೋಪ ಸಮಾರಂಭ ಮತ್ತು ದಾನಿಗಳ ಸಹಕಾರದಿಂದ ಉಚಿತ ಬರೆಯುವ ಪುಸ್ತಕ ವಿತರಣೆ, ಸಹಾಯ ಹಸ್ತ ವಿತರಣೆ ಕಾರ್ಯಕ್ರಮ ಗಂಡಿಬಾಗಿಲು ಶಾಲೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಸುಳ್ಯ ಶಾಸಕ ಎಸ್. ಅಂಗಾರ ಉದ್ಘಾಟಿಸಿ ಮಾತನಾಡಿ, ಇಂದು ಕೊಡುವವರು ಕಡಿಮೆ ಆಗುತ್ತಿದ್ದಾರೆ. ಕೊಡುವ ಮೂಲಕ ಸಮಾಜದಲ್ಲಿರುವ ಸಮಸ್ಯೆ, ಕಷ್ಟಗಳು ಕಡಿಮೆ ಆಗಲಿದೆ, ಜೊತೆಗೆ ಸಮಾಜ ಪರಿವರ್ತನೆಯ ಕಲ್ಪನೆ ಈ ಮೂಲಕ ಸಾಧ್ಯ ಎಂದರು. ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಮಾತನಾಡಿ ಇದೊಂದು ಮಾದರಿ ಕಾರ್ಯಕ್ರಮ, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚು ಜನರಿಗೆ ಉಪಯೋಗ ಆಗುವಂತಾಗಲಿ ಎಂದರು. ಗಂಡಿಬಾಗಿಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಬಡ್ಡಮೆ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ, ಆಲಂಕಾರು ಶಾಲಾ ಮುಖ್ಯ ಶಿಕ್ಷಕ ನಿಂಗರಾಜು, ಪೆರಾಬೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ, ಗಂಡಿಬಾಗಿಲು ಶಾಲಾ ಮುಖ್ಯ ಶಿಕ್ಷಕ ಶೇಖರ ಅತ್ನಿ ಸಂದರ್ಭೋಚಿತವಾಗಿ ಮಾತನಾಡಿದರು. ಸಮಾರಂಭದಲ್ಲಿ ಬಜತ್ತೂರು ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ಕಮಲಾಕ್ಷಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ವಿಸ್ತರಣಾಧಿಕಾರಿ ಸುರೇಶ್ ಶೆಟ್ಟಿ, ಕುಂಡಾಜೆ ಶಾಲಾ ಮುಖ್ಯ ಶಿಕ್ಷಕ ಪಿ.ಎಸ್. ನಾರಾಯಣ ಭಟ್, ಕರಿಯ ಗಾಣಂತಿ, ಮಹಾಬಲ ಪಡುಬೆಟ್ಟು, ಮೋನಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಯಂತಿ ಸ್ವಾಗತಿಸಿ, ಹರೀಶ್ ಕೆರ್ನಡ್ಕ ವಂದಿಸಿದರು. ದಿನೇಶ್ ಗಾಣಂತಿ ಕಾರ್ಯಕ್ರಮ ನಿರೂಪಿಸಿದರು.