(ನ್ಯೂಸ್ ಕಡಬ) newskadaba.com ಕಡಬ, ಸೆ.19. ಕೊೈಲ ಗ್ರಾಮದ ಏಣಿತ್ತಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸಂಘದ ವಠಾರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ವಾರಿಜರವರು ಮಾತನಾಡಿ, ವರದಿ ಸಾಲಿನಲ್ಲಿ ಸಂಘವು ವ್ಯಾಪಾರದಿಂದ 8,53,282 ರೂ. ಆದಾಯ ಗಳಿಸಿದ್ದು 5,76,884.38 ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. ಒಕ್ಕೂಟದ ವಿಸ್ತರಣಾಧಿಕಾರಿ ಆದಿತ್ಯರವರು ಹಾಲಿನ ಪೂರೈಕೆ, ಹಾಲಿನ ಗುಣಮಟ್ಟ ಮತ್ತು ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ, 180ಕ್ಕೂ ಹೆಚ್ಚು ದಿನ ಹಾಲು ಪೂರೈಸಿದ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ಹೆಚ್., ನಿರ್ದೇಶಕರುಗಳಾದ ನೀತ ಯನ್., ಸುಮಿತ್ರಾ, ಲಲಿತ ಯಸ್, ಶಂಕರಿ, ಜಲಜ, ಪಾರ್ವತಿ, ಸುಂದರಿ ಎ.ಕೆ., ಉಪಸ್ಥಿತರಿದ್ದರು. ಕಾರ್ಯದರ್ಶಿ ಪುಷ್ಪಾ ವರದಿ ವಾಚಿಸಿದರು. ಹಾಲು ಪರೀಕ್ಷಕಿ ಹರಿಣಾಕ್ಷಿ ಸ್ವಾಗತಿಸಿದರು. ನಿರ್ದೇಶಕಿ ನೀತಾ ಯನ್.ವಂದಿಸಿದರು.