ಕೆನರಾ ಎಂಜಿನಿಯರಿಂಗ್ ಕಾಲೇಜಿನ ರವೀಂದ್ರ ಮಲ್ಯರಿಗೆ ಡಾಕ್ಟರೇಟ್ ಪದವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.19. ಕೆನರಾ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕ ರವೀಂದ್ರ ಮಲ್ಯ ಅವರು ಮಾಹೆಯ ಡಾ.ರಘುವೀರ ಪೈ ಮತ್ತು ಡಾ.ಸತೀಶ್ ಶೆಣೈ ಅವರ ಮಾರ್ಗದರ್ಶನದಲ್ಲಿ ‘ಸ್ಟೆಬಿಲಿಟಿ ಆಫ್ ಮಲ್ಟಿಪಲ್ ಆಕ್ಸಿಲ್ ಗ್ರೂವ್ ವಾಟರ್ ಲೂಬ್ರಿಕೇಟೆಡ್ ಬೇರಿಂಗ್ ಇನ್‍ದ ಟರ್ಬುಲೆಂಟ್ ರೆಜಿಮ್’ ವಿಷಯದೊಂದಿಗೆ ಮಂಡಿಸಿದ ಮಂಡಿಸಿದ ಮಹಾಪ್ರಬಂಧಕ್ಕೆ ಮಾಹೆ ವಿವಿಯು ಪಿ.ಹೆಚ್.ಡಿ ಪದವಿ ನೀಡಿ ಗೌರವಿಸಿದೆ.

ರವೀಂದ್ರ ಮಲ್ಯ ಅವರು ಮಂಗಳೂರಿನ ವಿಶ್ರಾಂತ ಶಿಕ್ಷಕ, ಸಾವಯವ ಕೃಷಿ, ಜಲ ಮರುಪೂರಣ ತಜ್ಞ ಎಸ್. ಗಣೇಶ್ ಮಲ್ಯ ಹಾಗೂ ವಿನಯ ಮಲ್ಯ ದಂಪತಿಯ ಪುತ್ರ. ಪತ್ನಿ ಅನುಪಮ ಮಲ್ಯ ಅವರು ಸೈಂಟ್ ಆಗ್ನೆಸ್ ಸ್ನಾತಕೋತ್ತರ ಅಧ್ಯಯನ ವಿಭಾಗದ ಉಪನ್ಯಾಸಕಿಯಾಗಿದ್ದಾರೆ.

Also Read  ಉಪ್ಪಿನಂಗಡಿ: ಪ್ರೀತಿಸಿದರೂ ಮದುವೆಯಾಗಲು ಅಡ್ಡಿಯಾದ ತೀರಾ ಬಡತನ ➤ ಹಿಂದೂ ಯುವತಿಯ ಮದುವೆಗೆ ನೇತೃತ್ವ ನೀಡಿದ ಮುಸ್ಲಿಮರು

error: Content is protected !!
Scroll to Top