(ನ್ಯೂಸ್ ಕಡಬ) newskadaba.com ಕಡಬ, ಸೆ.17. ಸುಬ್ರಹ್ಮಣ್ಯ ಸಂಪುಟ ಶ್ರೀ ಲಕ್ಷ್ಮೀ ನರಸಿಂಹ ಮಠದ 16ನೇ ಮಠಾಧಿಪತಿ ಪೂಜ್ಯ ಶ್ರೀ ವೇದ ಪೂಜ್ಯ ತೀರ್ಥಶ್ರೀ ಆರಾಧಿಸಿಕೊಂಡು ಬಂದಿರುವ ಕಯಂಬಾಡಿ ಶ್ರೀ ಲಕ್ಷ್ಮೀ ನರಸಿಂಹ ದೇವರ ಹಾಗೂ ಕ್ಷೇತ್ರದ ದೈವಗಳ ಜೀರ್ಣೋದ್ಧಾರದ ಬಗ್ಗೆ ಕಯಂಬಾಡಿ ಬನ್ನಿಂತ್ತಾಯ ಕುಟುಂಸ್ಥರು ಹಾಗೂ ಕ್ಷೇತ್ರದ ಭಕ್ತಾದಿಗಳ ಸಭೆಯು ಕಡಬ ತಾಲೂಕಿನ ಕೇನ್ಯ ಗ್ರಾಮದ ಕಯಂಬಾಡಿ ಕ್ಷೇತ್ರದಲ್ಲಿ ನಡೆಯಿತು.
ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥರ ಗೌರವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೀರ್ಣೋದ್ದಾರ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಕೆ.ಅಚ್ಯುತ ಭಟ್, ಕಾರ್ಯದರ್ಶಿಯಾಗಿ ಕೆ.ಪ್ರಕಾಶ್ ಭಟ್ ಆಯ್ಕೆಯಾದರು. ಶ್ರೀ ಲಕ್ಷ್ಮೀ ನರಸಿಂಹ ಕ್ಷೇತ್ರದ ಆಡಳಿತ ಮೋಕ್ತೇಸರ ಕೆ. ಸತ್ಯನಾರಾಯಣ ಭಟ್ ಕಯಂಬಾಡಿ ಇವರು ಮುಂದಿನ ಜೀರ್ಣೋದ್ದಾರ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾವಣೆ ಮಾಡಿದರು. ಈ ಬಗ್ಗೆ ಕುಟುಂಬಸ್ಥರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಭೆಯಲ್ಲಿ ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಇರ್ವತ್ತೂರು ಗೋಪಾಲಕೃಷ್ಣ ಜೋಯಿಸರ ನೇತೃತ್ವದಲ್ಲಿ ಸೆ.26,27,28 ರಂದು ಪ್ರಶ್ನಾ ಚಿಂತನೆಯನ್ನು ಮಾಡುವುದಾಗಿ ನಿಶ್ಚಯಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಜೀರ್ಣೋದ್ದಾರ ಕಾರ್ಯಗಳು ಶೀಘ್ರ ನೆರವೇರಲು ದೇವರ ಪ್ರಾರ್ಥನೆಯೊಂದಿಗೆ ಸುಬ್ರಹ್ಮಣ್ಯ ಸ್ವಾಮೀಜಿಯವರ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದುಕೊಳ್ಳಲಾಯಿತು. ಸಭೆಯಲ್ಲಿ ಕಯಂಬಾಡಿ ಬನ್ನಿಂತ್ತಾಯ ಕುಟುಂಬದ ಪ್ರತಿ ಮನೆಯ ಸದಸ್ಯರು ಹಾಗೂ ಕ್ಷೇತ್ರದ ಭಕ್ತಾಧಿ ಸೇರಿದಂತೆ ಪ್ರಮುಖರಾದ ವಿಷ್ಣು ಮೂರ್ತಿ ಭಟ್ ಮಂಗಳೂರು, ನರಸಿಂಹ ಭಟ್ ಮಂಗಳೂರು, ವಿಷ್ಣುಭಟ್ ಕಡಬ, ರವಿಪ್ರಸಾದ್ ಬನ್ನಿಂತ್ತಾಯ ಗುಜ್ಜಲ, ದಿನೇಶ್ ಬನ್ನಿಂತ್ತಾಯ ಗುಜ್ಜಲ, ರಾಜೇಶ್ ಭಟ್ ಕೆರ್ಮಾಯಿ, ವಸಂತ ಭಟ್ ಬೆಂಗಳೂರು, ಅನಂತ ಭಟ್ ಪಂಜ, ಶೇಖರ ಭಟ್ ಪುತ್ತೂರು, ಶ್ರೀಕರ್ ಕಡಬ, ಶ್ರೀರಾಜ್ ಕಡಬ, ಪುಷ್ಪಲತಾ ಮಂಗಳೂರು, ಶ್ರೀಮತಿ ಕಮಲಮ್ಮ, ಹರಿಪ್ರಸಾದ್ ವಾಲ್ತಾಜೆ, ಶಿವಪ್ಪ ಗೌಡ, ಕೃಷ್ಣಪ್ಪ, ಪುಟ್ಟಣ್ಣ ಗೌಡ ಮೊದಲಾದವರು ಉಪಸ್ಥಿತರಿದ್ದರು.